ಯುವಜನಾಂಗ ಸಾಹಿತ್ಯದಿಂದ ವಿಮುಖ

ಬೆಳಗಾವಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಡಾ.ಗುರುದೇವಿ ಹುಲೆಪ್ಪನವರಮಠ ಉದ್ಘಾಟಿಸಿದರು. ಡಾ.ಗೀತಾಂಜಲಿ ಕುರಡಗಿ, ಡಾ.ಯಲ್ಲಪ ಹಿಮ್ಮಡಿ, ಡಾ.ಎಚ್.ಬಿ.ಕೋಲಕಾರ, ಸರ್ವಮಂಗಳಾ ಅರಳಿಮಟ್ಟಿ ಇದ್ದಾರೆ.
ಬೆಳಗಾವಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಡಾ.ಗುರುದೇವಿ ಹುಲೆಪ್ಪನವರಮಠ ಉದ್ಘಾಟಿಸಿದರು. ಡಾ.ಗೀತಾಂಜಲಿ ಕುರಡಗಿ, ಡಾ.ಯಲ್ಲಪ ಹಿಮ್ಮಡಿ, ಡಾ.ಎಚ್.ಬಿ.ಕೋಲಕಾರ, ಸರ್ವಮಂಗಳಾ ಅರಳಿಮಟ್ಟಿ ಇದ್ದಾರೆ.
Published on
ಬೆಳಗಾವಿ: ಕತೆ, ಕಾದಂಬರಿ ಓದುವ, ಹೇಳುವ ಮತ್ತು ಕೇಳುವ ವಾತಾವರಣ ನವ ಮಾಧ್ಯಮಗಳಿಂದಾಗಿ ಕಲುಷಿತಗೊಳ್ಳುತ್ತಿದೆ ಯುವಜನಾಂಗ ಓದುವ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಭಾನುವಾರ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಹಾಗೂ ನಾನು ನಮ್ಮವರೊಂದಿಗೆ ಫೌಂಡೇಷನ್ ಏರ್ಪಡಿಸಿದ್ದ ಕಟ್ಟೀಮನಿ ಕಥಾ ಕಥನ ಹಾಗೂ ಬೆಟಗೇರಿ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಟ್ಟೀಮನಿ ಮತ್ತು ಬೇಟಗೇರಿ ಅವರ ಸಾಹಿತ್ಯ ಯುವಜನತೆಗೆ ಪರಿಚಯಿಸುವ ಕಾರ್ಯ ಆಗಬೇಕಿದೆ ಎಂದರು.
ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಸದಸ್ಯ ಡಾ.ಎಚ್.ಬಿ.ಕೋಲಕಾರ ಮಾತನಾಡಿ, ಕೃಷ್ಣಶರ್ಮರು ರಾಷ್ಟ್ರೀಯ ನೆಲೆಯಲ್ಲಿ ಕನ್ನಡತನ ಕಟ್ಟಿದವರು. 16 ಕವನ ಸಂಕಲನಗಳಲ್ಲಿ 9 ರಾಷ್ಟ್ರಭಕ್ತಿಗೆ ಸಂಬಂಧಿಸಿವೆ.ಅವರ ಜನಪದ ಸಾಹಿತ್ಯ ಗ್ರಾಮ್ಯ ಬದುಕಿನ ಸಂಸ್ಕೃತಿ ಬಿಂಬಿಸುವಂತಹದು. ಶಿಷ್ಟ ಬರಹಗಾರರಿಂದ ಉಪೇಕ್ಷಿಸಲ್ಪಟ್ಟ ಗ್ರಾಮ್ಯ ಸಂಸ್ಕೃತಿಗೆ ಕೃಷ್ಣಶರ್ಮರ ಬರಹದಿಂದ ಪ್ರಾಧಾನ್ಯ ಸಿಕ್ಕಿತು. ಇವರ ನಲ್ವಾಡುಗಳನ್ನು ಹಾಡಿ ಹುಕ್ಕೇರಿ ಬಾಳಪ್ಪ ಪ್ರಸಿದ್ಧಿ ಪಡೆದರು ಎಂದರು.
ಟ್ರಸ್ಟ್ ಸದಸ್ಯೆ ಡಾ.ಗೀತಾಂಜಲಿ ಕುರಡಗಿ, ಕಟ್ಟೀಮನಿ ಪ್ರತಿಷ್ಠಾನ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ, ನಾನು ನಮ್ಮವರೊಂದಿಗೆ ಫೌಂಡೇಷನ್ ಅಧ್ಯಕ್ಷೆ ಸರ್ವಮಂಗಳಾ ಅರಳಿಮಟ್ಟಿ, ಹಿರಿಯ ಸಾಹಿತಿ ಸಿದ್ಧಗಂಗಮ್ಮ ಇತರರಿದ್ದರು. ಭಾಗ್ಯಶ್ರೀ ಭೈರಪ್ಪನವರ ಸ್ವಾಗತಿಸಿದರು. ಭವ್ಯಾ ಸಂಪಗಾರ ನಿರೂಪಿಸಿದರು. ಕಟ್ಟೀಮನಿ ಅವರ ಕತೆಗಳನ್ನು ಮಹಿಳಾ ಸಾಹಿತಿಗಳು ಪ್ರಸ್ತುತಪಡಿಸಿದರು. ಕೃಷ್ಣಶರ್ಮರ ನಲ್ವಾಡುಗಳನ್ನು ಕಲಾವಿದರು ಹಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net