ಮಾನಸಿಕ ಖಿನ್ನತೆಗೆ ಯೋಗವೇ ಪರಿಹಾರ

ಕಿತ್ತೂರು ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಯೋಗ ದಿನದ ಅಂಗವಾಗಿ ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಜಗದೀಶ ವಸದ, ನಾಗರಾಜ ಎಚ್.ಕೆ., ರಾಮಬಾವು, ಎಂ.ಜಿ.ಹಿರೇಮಠ, ಯೋಗ ಶಿಕ್ಷಕಿ ಸೌಮ್ಯಾ ರಾಘವೇಂದ್ರ ಇತರರಿದ್ದರು.
ಕಿತ್ತೂರು ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಯೋಗ ದಿನದ ಅಂಗವಾಗಿ ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಜಗದೀಶ ವಸದ, ನಾಗರಾಜ ಎಚ್.ಕೆ., ರಾಮಬಾವು, ಎಂ.ಜಿ.ಹಿರೇಮಠ, ಯೋಗ ಶಿಕ್ಷಕಿ ಸೌಮ್ಯಾ ರಾಘವೇಂದ್ರ ಇತರರಿದ್ದರು.
Published on
ಚನ್ನಮ್ಮನ ಕಿತ್ತೂರು:
ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ರೋವರ್ಸ್ ಮತ್ತು ರೇಂಜರ್ಸ್, ಯುಥ್‌ರೆಡ್ ಕ್ರಾಸ್ ವಿದ್ಯಾರ್ಥಿ ಒಕ್ಕೂಟಗಳ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಂದ ಹಿಡಿದು ವೃದ್ಧರಿಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಾಯಕವಾಗಿದೆ. ಆರೋಗ್ಯದ ಮೇಲೆ ಕಾಳಜಿಯಿರಲಿ ಸಧೃಡವಾದ ಆರೋಗ್ಯವಿದ್ದರೆ ಎಲ್ಲವೂ ಸಾಧಿಸಲು ಸಾಧ್ಯ ಎಂದರು.
ಕಿನಾವಿವ ಸಂಘದ ಮಾಜಿ ಚೇರ್ಮನ್ ಜಗದೀಶ ವಸದ ಮಾತನಾಡಿ, ನಮ್ಮಲ್ಲಿ ಶಾರೀರಿಕ ಕೆಲಸ ಕಡಿಮೆಯಾಗಿದೆ. ಇದರಿಂದ ನಮ್ಮ ನರನಾಡಿ ಸರಿಯಾಗಿ ಕಾರ್ಯನಿರ್ವಹಿಸದೇ, ರೋಗರುಜಿನಗಳಿಗೆ ತುತ್ತಾಗಿ ಜೀವಿತಾವಧಿ ಕ್ಷೀಣಿಸುತ್ತಿದೆ. ಯೋಗಾಭ್ಯಾಸವನ್ನು ರೂಢಿ ಮಾಡಿಕೊಳ್ಳುವುದರಿಂದ ಆರೋಗ್ಯವಂತರಾಗಿರಲು ಸಾಧ್ಯ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net