ಆರೋಗ್ಯಕರ ಜೀವನಕ್ಕೆ ಯೋಗ ಅಗತ್ಯ

ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಜರುಗಿದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನವೀನ ಎನ್. ಮಾತನಾಡಿದರು. ಡಾ.ಸಂಜಯ ಕಂಬಾರ, ಡಾ.ಅಂಟೋನಿಯೊ ಕರವಾಲೊ ಇತರರಿದ್ದರು.
ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಜರುಗಿದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನವೀನ ಎನ್. ಮಾತನಾಡಿದರು. ಡಾ.ಸಂಜಯ ಕಂಬಾರ, ಡಾ.ಅಂಟೋನಿಯೊ ಕರವಾಲೊ ಇತರರಿದ್ದರು.
Published on
ಬೆಳಗಾವಿ: ಯೋಗಾಚರಣೆ ಅನಾದಿಕಾಲದಿಂದ ರೂಢಿಯಲ್ಲಿದೆ. ಯೋಗದಿಂದ ನಮ್ಮ ಹಿರಿಯರು ಶತಾಯುಷಿಗಳಾಗಿದ್ದರು.
ಆರೋಗ್ಯಯುತ ಜೀವನಕ್ಕಾಗಿ ಯೋಗ ಅವಶ್ಯಕವಾಗಿದೆ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ ಎನ್. ಅಭಿಪ್ರಾಯಪಟ್ಟರು.
ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮಾನಸಿಕ ರೋಗ ಚಿಕಿತ್ಸಾ ವಿಭಾಗದ ಯೋಗ ಸಭಾಂಗಣದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿ, ಸರ್ವರಿಗೂ ಆರೋಗ್ಯ ಬೇಕೆಂದರೆ ದೈನಂದಿನ ಜೀವನದಲ್ಲಿ ಯೋಗ ಅನ್ವಯ ಅಗತ್ಯವಾಗಿದೆ ಎಂದರು.
ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಮಾತನಾಡಿ, ಯೋಗಾಚರಣೆ ಕೇವಲ ವ್ಯಾಯಾಮವಲ್ಲ, ಜೀವನ ಪದ್ದತಿಯಾಗಿದೆ. ಇದರಿಂದ ಶರೀರದಲ್ಲಿನ ರಕ್ತಸಂಚಾರ ಸರಾಗವಾಗಿ ಶರೀರದ ಪ್ರತಿಯೊಂದು ಅಂಗ ಪರಿಪೂರ್ಣ ಆರೋಗ್ಯ ಹೊಂದುತ್ತದೆ ಎಂದು ತಿಳಿಸಿದರು.
ಆಸ್ಪತ್ರೆಯ ಮಾನಸಿಕ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಅಂಟೋನಿಯೊ ಕರವಾಲೊ, ಇಂದಿನ ಒತ್ತಡಯುಕ್ತ ದಿನಗಳಲ್ಲಿ ಮನೋಕ್ಲೇಶಕ್ಕೆ ಒಳಗಾಗುವುದು ಸಹಜ. ಇದರಿಂದ ಮುಕ್ತಿಹೊಂದಲು ಬಯಸುವ ಪ್ರತಿಯೊಬ್ಬರೂ ಯೋಗ ಅನುಸರಿಸಬೇಕೆಂದರು.
ಮನೋರೋಗ ತಜ್ಞೆ ಡಾ.ಸುಮಿತ ದುರ್ಗೊಜಿ, ಡಾ.ವಿದ್ಯಾಶ್ರೀ, ಡಾ.ಸಂಜೀವಿನಿ, ಡಾ.ನಿತಿನ ಪಟ್ಟಣಶೆಟ್ಟಿ, ಲಕ್ಷ್ಮೀ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net