ಯಳ್ಳೂರಿನಲ್ಲಿ ಕುಸ್ತಿ ಪಂದ್ಯಾವಳಿ

Wrestling tournament in Yellur
Wrestling tournament in Yellur
Published on
ಬೆಳಗಾವಿ: ತಾಲೂಕಿನ ಯಳ್ಳೂರ ಗ್ರಾಮದಲ್ಲಿ ಕಲ್ಮೇಶ್ವರ, ಚಾಂಗಳೇಶ್ವರಿ ಮತ್ತು ಮಹಾಲಕ್ಷಿ$್ಮ ದೇವಿ ಜಾತ್ರೆಯ ಪ್ರಯುಕ್ತ ಏ.16ರಂದು ಮಧ್ಯಾಹ್ನ 2ರಿಂದ "ಲೋಕಮಾನ್ಯ ಕೇಸರಿ" ಶೀರ್ಷಿಕೆಯಡಿ ಕುಸ್ತಿ ಪದ್ಯಾವಳಿ ಆಯೋಜಿಸಲಾಗಿದೆ.
ಪಂದ್ಯಾವಳಿ ಉದ್ಘಾಟನೆ ಸಮಾರಂಭದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷಿ$್ಮ ಹೆಬ್ಬಾಳ್ಕರ್​, ಲೋಕಮಾನ್ಯ ವಿವಿಧೋದ್ದೇಶ ಸೊಸೈಟಿ ಸಂಸ್ಥಾಪಕ ಕಿರಣ ಠಾಕೂರ, ಕಾಂಗ್ರೆಸ್​ ಯುವಕ ಮುಖಂಡ ಮೃಣಾಲ ಹೆಬ್ಬಾಳ್ಕರ್​, ಡಿಸಿಸಿ ಬ್ಯಾಂಕ್​ ನಿರ್ದೇಶಕ ರಾಹುಲ ಜಾರಕಿಹೊಳಿ ಇತರರು ಪಾಲ್ಗೊಳ್ಳುವರು.
ಅಂತಾರಾಷ್ಟ್ರೀಯ ಮಟ್ಟದ ಪೈಲ್ವಾನ್​ ಮಿರ್ಜಾ ಇರಾನ್​ ವಿರುದ್ಧ ಭಾರತ ಕೇಸರಿ ಸಾಹಿಲ್​ ಕೊಲಿ, ಹರ್ಷವರ್ಧನ ಸದಗೀರ&ನಿರು ಗುರ್ಜರ, ಪೃಥ್ವಿರಾಜ ಪಾಟೀಲ&ಮುಸಾ ಪಂಜಾಬ, ರಾಹುಲ ಸುಳ&ರಾು ಟೊಂಬರೆ, ಸುಬೋಧ ಪಾಟೀಲ ವಿರುದ್ಧ ಹಿತು ಠಾಕೂರ ಸೇರಿದಂತೆ ಒಟ್ಟು 88 ಜೋಡಿ ಪೈಲ್ವಾನರು ಸೆಣಸಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net