ವಿಶ್ವಬ್ಯಾಂಕ್ ನಿಯೋಗ ಭೇಟಿ

 ಬೆಳಗಾವಿಗೆ ಗುರುವಾರ ಭೇಟಿ ನೀಡಿದ ವಿಶ್ವಬ್ಯಾಂಕ್ ದಕ್ಷಿಣ ಏಷ್ಯಾ ಉಪಾಧ್ಯಕ್ಷ ಜೋಹಾನ್ಸ್ ಜುಟ್‌ರಿಗೆ ಕೆಯುಐಡಿಎಫ್‌ಸಿ ಎಂಡಿ ಪೂವಿತಾ ಮಾಹಿತಿ ನೀಡಿದರು.
ಬೆಳಗಾವಿಗೆ ಗುರುವಾರ ಭೇಟಿ ನೀಡಿದ ವಿಶ್ವಬ್ಯಾಂಕ್ ದಕ್ಷಿಣ ಏಷ್ಯಾ ಉಪಾಧ್ಯಕ್ಷ ಜೋಹಾನ್ಸ್ ಜುಟ್‌ರಿಗೆ ಕೆಯುಐಡಿಎಫ್‌ಸಿ ಎಂಡಿ ಪೂವಿತಾ ಮಾಹಿತಿ ನೀಡಿದರು.
Published on
ಬೆಳಗಾವಿ: ವಿಶ್ವ ಬ್ಯಾಂಕ್ ದಕ್ಷಿಣ ಏಷ್ಯಾ ಪ್ರದೇಶದ ಉಪಾಧ್ಯಕ್ಷ ಜೋಹಾನ್ಸ್ ಜುಟ್ ನೇತೃತ್ವದ ವಿಶ್ವ ಬ್ಯಾಂಕ್ ನಿಯೋಗವು ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (24/7 ನಿರಂತರ ನೀರು ಸರಬರಾಜು ಯೋಜನೆ) ಪರಿಶೀಲನೆಗಾಗಿ ಗುರುವಾರ ಬೆಳಗಾವಿ ನಗರಕ್ಕೆ ಭೇಟಿ ನೀಡಿತ್ತು.
ವಂಟಮುರಿ ಕಾಲನಿ ಮತ್ತು ಮುತ್ತ್ಯಾನಟ್ಟಿಗೆ ಘಟಕಗಳಿಗೆ ಭೇಟಿ ನೀಡಿ, ಸಾರ್ವಜನಿಕೊಂದಿಗೆ ಸಂವಾದ ನಡೆಸಿದರು. ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕಿ ಪೂವಿತಾ ಎಸ್. ವಿಶ್ವಬ್ಯಾಂಕ ಪ್ರತಿನಿಧಿಗಳಿಗೆ ನಗರ ನೀರು ಸರಬರಾಜು ಆಧುನೀಕರಣ ಯೋಜನೆ ಪ್ರಗತಿ ಮತ್ತು ಮಧ್ಯಸ್ಥಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ವಿಶ್ವ ಬ್ಯಾಂಕ್ ತಂಡದ ಸುಮಿತಾ ಗುಲ್ಯಾನಿ, ಡೋನಾ ತೊರಾ, ಉಪನೀತ ಸಿಂಗ್, ರಾಜೇಶ ಅದ್ವಾನಿ, ರಾಜಗೋಪಾಲಸಿಂಗ್, ನೀತು ಶಾರದ, ಶಾಸಕರಾದ ಆಸೀಫ್ ಸೇಠ್, ಅಭಯ ಪಾಟೀಲ, ಕೆಯುಐಡಿಎಫ್‌ಸಿಯ ಜೆ.ಆರ್.ನಂದೀಶ್, ಸೋಮಶೇಖರಪ್ಪ, ಆಂಜನಪ್ಪ, ಯೋಜನಾ ಅನುಷ್ಠಾನ ಘಟಕದ ಲಕ್ಷೀ ಸುಳಗೇಕರ, ಎಸ್.ಎಸ್.ಹತ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net