ನೀರಾವರಿ ಯೋಜನೆ ಕುರಿತ ಕಾರ್ಯಾಗಾರ

ಬೆಳಗಾವಿಯಲ್ಲಿ ಜರುಗಿದ ನೀರಾವರಿ ಯೋಜನೆಗಳ ಕುರಿತ ಕಾರ್ಯಾಗಾರದಲ್ಲಿ ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಯಿತು.
ಬೆಳಗಾವಿಯಲ್ಲಿ ಜರುಗಿದ ನೀರಾವರಿ ಯೋಜನೆಗಳ ಕುರಿತ ಕಾರ್ಯಾಗಾರದಲ್ಲಿ ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಯಿತು.
Published on
ಬೆಳಗಾವಿ: ದಿ ಇನಸ್ಟಿಟ್ಯೂಟ್ ಆಫ್ ಇಂಜನಿಯರ್ಸ್‌ ಸ್ಥಳೀಯ ಕೇಂದ್ರ ಹಾಗೂ ಜಲಸಂಪನ್ಮೂಲ ಇಲಾಖೆ ಏರ್ಪಡಿಸಿದ್ದ ನೀರಾವರಿ ಯೋಜನೆಗಳು- ಬದಲಾಗುತ್ತಿರುವ ಹವಾಮಾನ ಸನ್ನಿವೇಶದಲ್ಲಿ ಅವುಗಳ ಸುಸ್ಥಿರತೆ, ಚೇತರಿಕಾ ಸಾಮರ್ಥ್ಯ ಹಾಗೂ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯದ ಕುರಿತು ಈಚೆಗೆ ಎರಡು ದಿನಗಳ ರಾಷ್ಟ್ರೀಯಮಟ್ಟದ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ನೀರಾವರಿ ಇಲಾಖೆ ನಿವೃತ್ತ ಕಾರ್ಯದರ್ಶಿ ಕೆ.ಜೈಪ್ರಕಾಶ ಕಾರ್ಯಾಗಾರ ಉದ್ಘಾಟಿಸಿದರು. ನಿವೃತ್ತ ಮುಖ್ಯ ಇಂಜಿನಿಯರ್ ಮಾಧವ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಭಾವಿ, ಐಇಐ ಅಧ್ಯಕ್ಷ ಸಿ.ಬಿ.ಹಿರೇಮಠ, ನಿವೃತ್ತ ಮುಖ್ಯ ಇಂಜಿನಿಯರ್ ಎಸ್.ಎಸ್. ಖನಗಾವಿ, ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಡಿ.ಆರ್.ರಾಠೋಡ, ಸಂಜೀವಕುಮಾರ ಹುಲಕಾಯಿ, ಸುರೇಶ ಇತರರಿದ್ದರು.
ಅರವಿಂದ ಗಲಗಲಿ, ಡಾ.ರಾಜೇಂದ್ರ ಪೋದ್ದಾರ, ಡಾ.ಶರತ ಜೋಶಿ ಸೇರಿದಂತೆ 9 ಜನ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ವಿಚಾರಗಳನ್ನು ಮಂಡಿಸಿದರು.
ವಿಲಾಸ ಬದಾಮಿ ಸ್ವಾಗತಿಸಿದರು, ಎಸ್.ವೈ.ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವೆಂಕಟೇಶ, ದೀಪಾ, ಡಾ.ಮಂಜುನಾಥ, ಪ್ರೊ. ನಯನಾ, ಡಾ.ಸಂಜೀವ ಸಂಗಮಿ ಅತಿಥಿಗಳನ್ನು ಪರಿಚಯಿಸಿದರು. ಡಾ.ಮಂಜುನಾಥ ನಿರೂಪಿಸಿದರು. ಡಾ. ಜ್ಯೋತಿ ಪಾಟೀಲ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net