ಉನ್ನತ ಶಿಕ್ಷಣ ಸಂಸ್ಥೆಗಳ ಅಂತರರಾಷ್ಟ್ರೀಕರಣ ಕುರಿತ ಕಾರ್ಯಾಗಾರ

ಉನ್ನತ ಶಿಕ್ಷಣ ಸಂಸ್ಥೆಗಳ ಅಂತರರಾಷ್ಟ್ರೀಕರಣ' ಕುರಿತು ಒಂದು ದಿನದ ಕಾರ್ಯಾಗಾರ  ಮಾತನಾಡಿದ ಶಿಕ್ಷಕರು, ಸಂಶೋಧಕರು.
ಉನ್ನತ ಶಿಕ್ಷಣ ಸಂಸ್ಥೆಗಳ ಅಂತರರಾಷ್ಟ್ರೀಕರಣ' ಕುರಿತು ಒಂದು ದಿನದ ಕಾರ್ಯಾಗಾರ ಮಾತನಾಡಿದ ಶಿಕ್ಷಕರು, ಸಂಶೋಧಕರು.
Published on

ಬೆಳಗಾವಿ: ನಗರದ ಕೆಎಲ್‌ಇ ಜಿರಗೆ ಸಭಾಭವನದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಾಗೂ ಪಿ ಎಮ್ ಉಷಾ (ಮೇರು) ಅನುದಾನದಡಿಯಲ್ಲಿ ಆಯೋಜಿಸಲಾದ ಅಂತರಿಕ ಗುಣಮಟ್ಟ ಭರವಸೆ ಕೋಶವು "ಉನ್ನತ ಶಿಕ್ಷಣ ಸಂಸ್ಥೆಗಳ ಅಂತರರಾಷ್ಟ್ರೀಕರಣ' ಕುರಿತು ಒಂದು ದಿನದ ಕಾರ್ಯಾಗಾರ ಜರುಗಿತ್ತು.

ಈ ವೇಳೆ ಬಿ.ಐ.ಟಿ.ಎನ್. ಗೋವಾದ ಡಾ. ವಿನಯ್ ಕುಮಾರ್ ಅವರು ಮಾತನಾಡಿ, NEP (ಹೊಸ ಶಿಕ್ಷಣ ನೀತಿ) ವೂ, ಉನ್ನತ ಶಿಕ್ಷಣ ಒಂದು ಪ್ರಮುಖ ಅಂಗವಾಗಿದೆ. ಇದು ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಅವಕಾಶಗಳನ್ನು ನೀಡುತ್ತದೆ. ಮೂರು-ವಿಷಯ ವ್ಯವಸ್ಥೆಯು ಬಹು-ಶಿಸ್ತಿನ ಮತ್ತು ಅಂತರ-ಶಿಸ್ತಿನಿಂದ ಕೂಡಿದ್ದು, ಅಭ್ಯರ್ಥಿಗಳಿಗೆ ಸಮಗ್ರ ಜ್ಞಾನವನ್ನು ಒದಗಿಸುತ್ತದೆ. ಮತ್ತು ಬಹು ವಿಷಯಗಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಂತಾಗುತ್ತದೆ ಎಂದು ಹೇಳಿದರು.

ಕ್ರೈಸ್ಥ ವಿಶ್ವವಿದ್ಯಾಲಯದ ಪ್ರೊ. ಗುರುಮೂರ್ತಿ ಹೆಗ್ಡೆ ಅವರು ಮಾತನಾಡಿ, ಜಾಗತಿಕ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯಗಳನ್ನು ಒದಗಿಸಲು ಪಠ್ಯಕ್ರಮವನ್ನು ನವೀಕರಿಸಿ, ಶಿಕ್ಷಣದ ಗುಣಮಟ್ಟವನ್ನು ಜಾಗತಿಕ ಮಾನದಂಡಗಳೊಂದಿಗೆ ಯುವಕರಿಗೆ ದೇಶ-ವಿದೇಶದಲ್ಲಿ ಉದ್ಯೋಗ ಅವಕಾಶ ಕಲ್ಪಿಸುವ ಎಲ್ಲಾ ಆಯಾಮಗಳನ್ನು ತಿಳಿಸಿದರು. ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಅಂತರರಾಷ್ಟ್ರೀಕರಣದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಿದರು.

ಕಾರ್ಯಕ್ರಮದ ಚರ್ಚೆಯಲ್ಲಿ ಭಾರತ, ಚೀನಾ, ಮಲೇಷ್ಯಾ ಮತ್ತು ಒಮಾನ್ ದೇಶಗಳ ತಜ್ಞರು ಭಾಗವಹಿಸಿ, ಅವರು ಕೂಡ ಗುಣಮಟ್ಟದ ಶಿಕ್ಷಣ, ಸಂಶೋಧನೆ ಮತ್ತು ಅಂತರರಾಷ್ಟ್ರೀಕರಣದ ಮಹತ್ವ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸುವ ನೀತಿಗಳು, ಶೈಕ್ಷಣಿಕ ಮೂಲಸೌಕರ್ಯ ಮತ್ತು ಅಧ್ಯಯನ ವಿಧಾನಗಳನ್ನು ಬಲಪಡಿಸುವ ಅಗತ್ಯತೆ ಬಗ್ಗೆ ಚರ್ಚಿಸಿದರು. ಮತ್ತು ಸಂಶೋಧನೆ ಮತ್ತು ಉದ್ಯೋಗಾವಕಾಶವನ್ನು ಸುಧಾರಿಸಲು ಶೈಕ್ಷಣಿಕ ವಿಭಾಗದಲ್ಲಿ ಉದ್ಯಮಿಗಳ ಸಹಯೋಗ ಅವಶ್ಯಕತೆಯನ್ನು ಒತ್ತಿ ಹೇಳಿದರು.

ಈ ಕಾರ್ಯಗಾರದಲ್ಲಿ ಜಮಾನ್ ದೇಶದ ಸುಲ್ತಾನ್ ಕಬೂನ್ ವಿಶ್ವವಿದ್ಯಾಲಯದ ಪ್ರೊ. ರಂಗರಾಜ್ ನೆಲ್ವರಾಜ್, ಚೀನಾದ ಶೆನ್ಸೆನ್ ವಿಶ್ವವಿದ್ಯಾಲಯದ ಟಿಎಸ್‌ಐ ಪದವಿ ಶಾಲೆಯ ಡಾ. ಪೀಟರ್ ಇ. ಮೋಬಿ, ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಡಾ. ಎನ್. ಕೆ. ನಟರಾಜ್, ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್) ನ ಸೌರಭ್ ಕುಮಾರ್ , ಎಂ.ಎನ್. ರಾಮಯ್ಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊ. ಅಶ್ವಿನಿ, ಮಲೇಷಿಯಾ ವಿಶ್ವವಿದ್ಯಾಲಯದ ಶ್ರೀ ಮೊಹಮ್ಮದ್ ಯಾಜಿರ್ ಬಿನ್ ಯಾಹ್ಯಾ, ಮಲೇಷಿಯಾ ವಿಶ್ವವಿದ್ಯಾಲಯದ ಅಹ್ಮದ್ ಇಲ್ಯಾಸ್ ಬಿನ್ ರಶ್ಲಾನ್ ಇದ್ದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಡಾ. ಪಿ. ಎಂ. ಗುರುಬಸವರಾಜ ವಹಿಸಿದ್ದರು. ಪಾನೆಲ್ ನಿರ್ವಾಕರಾಗಿ ಪ್ರೊ. ಅಶೋಕ ಡಿಸೋಜಾ ಮತ್ತು ಪ್ರೊ. ಜೆ. ಮಂಜಕ್ಕಾ ಕಾರ್ಯ ನಿರ್ವಹಿಸಿದರು. ಡಾ. ನಂದಿನಿ ದೇವರಮನಿ, ನೋಡಲ್ ಅಧಿಕಾರಿ, ಪಿ.ಎಮ್.ಉಷಾ, ರಾಚವಿ, ಮತ್ತು ಸಂಯೋಚಿತ ಮಹಾವಿದ್ಯಾಲಯಗಳ ಶಿಕ್ಷಕರು, ಸಂಶೋಧಕರು ಮತ್ತು ಸೈಕ್ಷಣಿಕ ನಿರ್ವಾಹಕರು, ರಾಚವಿಯ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net