ಮಹಿಳೆಯರು ಆರೋಗ್ಯದತ್ತ ಗಮನ ಹರಿಸಲಿ

ಯಳ್ಳೂರು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸತೀಶ ದಾಮಣಕರ ಮಾತನಾಡಿದರು. ನವೀನ ಎನ್., ಡಾ.ಎಂ.ಎಸ್.ಕಡ್ಡಿ, ಡಾ.ಸಂಜಯ ಕಂಬಾರ, ಡಾ.ಎಚ್.ಬಿ. ರಾಜಶೇಖರ, ಡಾ.ಗೀತಾಂಜಲಿ ತೋಟಗಿ, ಡಾ.ಕೆ.ಎನ್ ಹೋಳಿಕಟ್ಟಿ ಇದ್ದರು.
ಯಳ್ಳೂರು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸತೀಶ ದಾಮಣಕರ ಮಾತನಾಡಿದರು. ನವೀನ ಎನ್., ಡಾ.ಎಂ.ಎಸ್.ಕಡ್ಡಿ, ಡಾ.ಸಂಜಯ ಕಂಬಾರ, ಡಾ.ಎಚ್.ಬಿ. ರಾಜಶೇಖರ, ಡಾ.ಗೀತಾಂಜಲಿ ತೋಟಗಿ, ಡಾ.ಕೆ.ಎನ್ ಹೋಳಿಕಟ್ಟಿ ಇದ್ದರು.
Published on
ಬೆಳಗಾವಿ: ತಾಯಿಯ ಆರೋಗ್ಯವೇ ಕುಟುಂಬದ ಆರೋಗ್ಯ. ಮಹಿಳೆಯರು ಆರೋಗ್ಯದತ್ತ ಗಮನ ಹರಿಸಬೇಕೇಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಸ್ತ್ರೀರೊಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ.ಸತೀಶ ದಾಮಣಕರ ಹೇಳಿದರು.
ಇಲ್ಲಿನ ಯಳ್ಳೂರು ರಸ್ತೆಯಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದಿಂದ ಸೋಮವಾರ ಆಸ್ಪತ್ರೆಯ ಒಪಿಡಿ ವಿಭಾಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರಿಗೆ ನಿಯಮಿತ ಆರೋಗ್ಯ ತಪಾಸಣೆ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಳಜಿ ಅಗತ್ಯ ಎಂದರು. ಆಸ್ಪತ್ರೆ ಮುಖ್ಯ ನಿರ್ವಹಣಾಧಿಕಾರಿ ನವೀನ ಎನ್. ಮಾತನಾಡಿ, ಒಂದು ಮಗುವನ್ನು ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ತಾಯಿ ಪಾತ್ರ ಮಹತ್ವದ್ದು. ತಾಯಿಯ ತ್ಯಾಗ, ಪ್ರೀತಿ, ಮಮತೆ ಅಪಾರ ಎಂದರು.
ಅಧ್ಯಕ್ಷತೆ ವಹಿಸಿದ್ದ್ದ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಮಾತನಾಡಿ, ಒಬ್ಬ ವ್ಯಕ್ತಿಯ ಜೀವನ ರೂಪಿಸುವಲ್ಲಿ ಹೆತ್ತವರ ಪಾತ್ರ ಅಪಾರ ಎಂದರು. ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ಕಡ್ಡಿ ಮಾತನಾಡಿ, ತಾಯಂದಿರಲ್ಲಿರುವ ತಪ್ಪು ಕಲ್ಪನೆ ಹಾಗೂ ಮೂಢನಂಬಿಕೆ ಬಗ್ಗೆ ವಿವರಿಸಿ, ನವಜಾತ ಶಿಶುಗಳಿಗೆ ಕಪ್ಪು ಕಾಡಿಗೆ ಹಾಕುವುದು ಹಲವಾರು ಕುಟುಂಬಗಳಲ್ಲಿ ರೂಢಿಯಿದೆ, ಆದರೆ ಬಹುತೇಕ ಕಪ್ಪು ಕಾಡಿಗೆಗಳಲ್ಲಿ ಹಾನಿಕಾರಕ ಪದಾರ್ಥಗಳು, ಧೂಳು ಇರಬಹುದು. ಆದ್ದರಿಂದ ಎಚ್ಚರಿಕೆ ವಹಿಸಬೇಕು ಎಂದರು. ತಾಯಂದಿರಿಗೆ ಆರೊಗ್ಯ ಕಾಳಜಿ ಕಿಟ್ ಉಚಿತವಾಗಿ ವಿತರಿಸಲಾಯಿತು. ಯುಎಸ್‌ಎಂ ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ, ಡಾ.ಗೀತಾಂಜಲಿ ತೋಟಗಿ, ಡಾ.ಕೆ.ಎನ್.ಹೋಳಿಕಟ್ಟಿ, ಡಾ.ಪ್ರಿಯಾಂಕಾ, ಡಾ.ಸಯ್ಯದಾ, ಡಾ.ಸೌಮ್ಯಾ ವೇರ್ಣೆಕರ, ಡಾ.ಯೋಗೇಶ ರಾವಳ, ಪ್ರಭಾವತಿ ತೇಗೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net