ಸಂಶೋಧನಾ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಕೊಳ್ಳಬೇಕು

ಬೆಳಗಾವಿಯ ಮಹಾಂತ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ದಿನವನ್ನು ಡಾ.ಶಶಿಕಲಾ ಕರಡಿಗುದ್ದಿ ಉದ್ಘಾಟಿಸಿದರು.
ಬೆಳಗಾವಿಯ ಮಹಾಂತ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ದಿನವನ್ನು ಡಾ.ಶಶಿಕಲಾ ಕರಡಿಗುದ್ದಿ ಉದ್ಘಾಟಿಸಿದರು.
Published on
ಬೆಳಗಾವಿ: ವಿಜ್ಞಾನ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಬಾರದು. ವಿಜ್ಞಾನದ ನೈಜ ಉದ್ದೇಶಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಹೆಚ್ಚಳವಾಗುವುದು ಅತ್ಯಂತ ಅವಶ್ಯಕ ಎಂದು ಬೈಲಹೊಂಗಲದ ಕಿತ್ತೂರ ರಾಣಿ ಚನ್ನಮ್ಮ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಶಶಿಕಲಾ ಕರಡಿಗುದ್ದಿ ಹೇಳಿದರು.
ನಗರದ ಮಹಾಂತ ಭವನದಲ್ಲಿ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಿಂದ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ಪ್ರಯೋಗಗಳ ಪ್ರದರ್ಶನವನ್ನು ಕಾಮನ ಬಿಲ್ಲಿನ ಬಣ್ಣಗಳ ಸಂಯೋಜನೆಯ ವಿಜ್ಞಾನ ಪ್ರಯೋಗವನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, 2026ರ ವಿಜ್ಞಾನ ದಿನಾಚರಣೆಯ ಧ್ಯೇಯವಾಕ್ಯವಾದ ವಿಜ್ಞಾನದಲ್ಲಿ ಮಹಿಳೆ ವಿಕಸಿತ ಭಾರತಕ್ಕಾಗಿ ವೇಗವರ್ಧಕವಾಗಿ ಕೆಲಸ ಮಾಡುವುದು ಎಂಬ ವಿಷಯದ ಕುರಿತು ವಿಶ್ಲೇಷಿಸಿದರು.
ಮಹಾಂತೇಶ ನಗರ ರಹವಾಸಿಗಳ ಸಂಘದ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸ್ಮಿತಾ ಪಟ್ಟೇದ ಮಾತನಾಡಿ, ವಿಜ್ಞಾನ ಎಲ್ಲ ಕ್ಷೇತ್ರಗಳಲ್ಲಿಯೂ ಅಡಗಿದೆ. ವಿಜ್ಞಾನದಿಂದಲೇ ಸಮಾಜ ಹಾಗೂ ರಾಷ್ಟ್ರದ ಪ್ರಗತಿ ಸಾಧ್ಯ. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಹಾಗೂ ಪ್ರಶ್ನೆ ಕೇಳುವ ಕೌಶಲವನ್ನು ಬೆಳೆಸುವ ಮೂಲಕ ವಿಜ್ಞಾನ ಶಿಕ್ಷಕರು ಮಕ್ಕಳಿಗೆ ಮನಮುಟ್ಟುವ ರೀತಿಯಲ್ಲಿ ಪಾಠ ಮಾಡಬೇಕು ಎಂದರು.
ಪ್ರಾಚಾರ್ಯ ಡಾ.ನಿರ್ಮಲಾ ಬಟ್ಟಲ ಅಧ್ಯಕ್ಷತೆ ವಹಿಸಿದ್ದರು. ಅಗಸ್ತ್ಯ ಫೌಂಡೇಶನ್ ಪ್ರತಿನಿಧಿ ಸಂಗಮೇಶ ಅಂಗಡಿ, ಡಾ. ಗೀತಾ ದಯಣ್ಣವರ, ಇತರರಿದ್ದರು.
ಲಕ್ಷ್ಮಿ ಹುಬ್ಬಳ್ಳಿ ಪ್ರಾರ್ಥಿಸಿದರು. ಪ್ರೊ.ಸೋನಲ ಚಿನಿವಾಲ ಸ್ವಾಗತಿಸಿದರು. ಪೂಜಾ ಕೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಅನ್ನಪೂರ್ಣಾ ಹಣಬರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net