ಅರಿಹಂತ ಸಂಸ್ಥೆಯಿಂದ ಸ್ತ್ರೀ ಸಬಲೆ

ಬೋರಗಾಂವನಲ್ಲಿ ಅರಿಹಂತ ಗಾರ್ಮೆಂಟ್ಸ್ 15ನೇ ವಾರ್ಷಿಕೋತ್ಸವ ಆಚರಿಸಲಾಯಿತು. ವಿನಯಶ್ರೀ ಪಾಟೀಲ, ಜಯಶ್ರೀ ಕಮ್ಮಾರ, ಧನಶ್ರೀ ಪಾಟೀಲ, ಕಮಲ ಫಿರಗನ್ನವರ, ಸಂಗೀತಾ ಪಾಟೀಲ, ಸುವರ್ಣಾ ನಾಗಠಾಣೆ ಇತರರಿದ್ದರು.
ಬೋರಗಾಂವನಲ್ಲಿ ಅರಿಹಂತ ಗಾರ್ಮೆಂಟ್ಸ್ 15ನೇ ವಾರ್ಷಿಕೋತ್ಸವ ಆಚರಿಸಲಾಯಿತು. ವಿನಯಶ್ರೀ ಪಾಟೀಲ, ಜಯಶ್ರೀ ಕಮ್ಮಾರ, ಧನಶ್ರೀ ಪಾಟೀಲ, ಕಮಲ ಫಿರಗನ್ನವರ, ಸಂಗೀತಾ ಪಾಟೀಲ, ಸುವರ್ಣಾ ನಾಗಠಾಣೆ ಇತರರಿದ್ದರು.
Published on
ಬೋರಗಾಂವ: ಸ್ತ್ರೀಯರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ 15 ವರ್ಷದ ಹಿಂದೆ ದಿ.ರಾವಸಾಹೇಬ ಪಾಟೀಲ ಅರಿಹಂತ ಗಾರ್ಮೆಂಟ್ಸ್ ಸ್ಥಾಪಿಸಿ 200ಕ್ಕೂ ಹೆಚ್ಚು ಮಹಿಳೆಯರಿಗೆ ಕೆಲಸ ನೀಡಿದ್ದಾರೆ ಎಂದು ಅರಿಹಂತ ಶುಗರ್ಸ್‌ ನಿರ್ದೇಶಕಿ ವಿನಯಶ್ರೀ ಪಾಟೀಲ ಹೇಳಿದರು.
ಪಟ್ಟಣದ ಅರಿಹಂತ ಗಾರ್ಮೆಂಟ್ಸ್‌ನಲ್ಲಿ ಗುರುವಾರ 15ನೇ ವಾರ್ಷಿಕೋತ್ಸವ ಆಚರಿಸಿ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಅರಿಹಂತ ಸಂಸ್ಥೆ ಕೈಜೋಡಿಸಿದೆ. ಯುವನಾಯಕ ಉತ್ತಮ ಪಾಟೀಲ ಸಾಮಾಜಿಕ ಬದ್ಧತೆಗೆ ಮಹತ್ವ ನೀಡಿದ್ದಾರೆ ಎಂದರು.
ಸುಮಿತ್ ರೊಡ್ಡ, ರಾಜೇಂದ್ರ ಐದಮಾಳೆ, ದರ್ಶನ ಪಾಟೀಲ, ರಾಜು ಗಜರೆ, ಅಶೋಕ ಮಾಳಿ, ಸಹಾಯಕ ವ್ಯವಸ್ಥಾಪಕ ರಾಕೇಶ ಫಿರಗಣ್ಣವರ, ಉಪೇಂದ್ರ ಕಾಮತ, ಮಹೇಶ ಚಿಪ್ರೆ, ಜಯಶ್ರೀ ಕಮ್ಮಾರ, ಅಭಿಜಿತ್ ವಠಾರೆ, ಧನಶ್ರೀ ಪಾಟೀಲ, ಕಮಲ ಫಿರಗನ್ನವರ, ಸಂಗೀತಾ ಪಾಟೀಲ, ಸುವರ್ಣಾ ನಾಗಠಾಣೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net