ಮಹಿಳೆಯರು ಸಮಾಜದ ಸ್ಫೂರ್ತಿಸೆಲೆ

ನಿಪ್ಪಾಣಿಯ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನದ ಕಾರ್ಯಕ್ರಮಕ್ಕೆ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಚಾಲನೆ ನೀಡಿದರು. ಗೌರಿ ಮಾಂಜರೇಕರ,  ದಯಾ ಶಹಾಪುರಕರ, ಗೀತಾ ಕಿತ್ತೂರ, ಜಯಶ್ರೀ ಹಾಲಭಾವಿ, ಡಾ.ಸಿದ್ಧಗೌಡ ಪಾಟೀಲ ಇತರರಿದ್ದರು.

Published on
ನಿಪ್ಪಾಣಿ: ಮಹಿಳೆ ಇಡೀ ಮಾನವ ಸಮಾಜಕ್ಕೆ ಮುಖ್ಯ ಮಾರ್ಗದರ್ಶಿ ಮತ್ತು ಸ್ಫೂರ್ತಿಯಾಗಿದ್ದಾಳೆ. ಮಹಿಳೆ ಇಲ್ಲದೆ ಜೀವನ ಅಪೂರ್ಣ ಎಂದು ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.
ಪಟ್ಟಣದ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರ ಪಾತ್ರ ಅಮೂಲ್ಯವಾದುದು, ತಾಯಿಯಾಗಿ, ಸಹೋದರಿಯಾಗಿ ಮತ್ತು ಮಡದಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಮಹಿಳೆಯರ ಪ್ರತಿಯೊಂದು ಪಾತ್ರವನ್ನು ಗೌರವಿಸುವ ಮೂಲಕ ಅವರಿಗೆ ಕೃತಜ್ಞರಾಗಿರಬೇಕು ಎಂದರು.
ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ.ಶಾಂತಾ ಪೋರಾಪುರ, ಸಿಇಒ ಡಾ.ಸಿದ್ದಗೌಡ ಪಾಟೀಲ ಮತ್ತು ಪಂಖ್ ೌಂಡೇಷನ್ ಸಂಸ್ಥಾಪಕಿ ಗೌರಿ ಮಾಂಜರೇಕರ ಮಾತನಾಡಿದರು.
ಪ್ರಾಚಾರ್ಯ ಡಾ.ಉಮೇಶ ಪಾಟೀಲ, ಲಯನ್ಸ್ ಕ್ಲಬ್ ಅಧ್ಯಕ್ಷೆ ದಯಾ ಶಹಾಪುರಕರ, ಸದಸ್ಯೆ ಗೀತಾ ಕಿತ್ತೂರ, ಜಯಶ್ರೀ ಹಾಲಭಾವಿ ಅವರನ್ನು ಸನ್ಮಾನಿಸಲಾಯಿತು. ಭಾಗ್ಯಶ್ರೀ ಕೆ. ಪ್ರಾರ್ಥಿಸಿದರು. ಪ್ರೊ.ಕವಿತಾ ವಸೆದಾರ ಸ್ವಾಗತಿಸಿದರು. ಶ್ರುತಿ ಪಟ್ಟಣಶೆಟ್ಟಿ, ಶ್ರದ್ಧಾ ಪಾಟೀಲ, ಪ್ರಾಜಕ್ತಾ ವಿ. ಅತಿಥಿಗಳನ್ನು ಪರಿಚಯಿಸಿದರು. ಡಾ.ಸಮೀರಾ ಬಾಗೇವಾಡಿ ನಿರೂಪಿಸಿದರು. ಪ್ರೊ.ಮಾಧವಿ ಅವಳೇಕರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net