ಬಡ್ಡಿ ದಂಧೆ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ ಬೆದರಿಕೆ

ಸಂಪತ್​ಕುಮಾರಿ ಮಲಗೌಡನವರ
ಸಂಪತ್​ಕುಮಾರಿ ಮಲಗೌಡನವರ
Published on
ಹುಕ್ಕೇರಿ: ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಬಡ್ಡಿ ವ್ಯವಹಾರಸ್ಥರು ಬಡ್ಡಿ ಹಣಕ್ಕೆ ಒತ್ತಾಯಿಸಿ, ಕಿರುಕುಳ ನೀಡುತ್ತಿದ್ದಾರೆ ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸಂಪತ್​ಕುಮಾರಿ ರವೀಂದ್ರ ಮಲಗೌಡನವರ ಎಂಬ ಮಹಿಳೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೆರಲ್​ ಆಗಿದೆ.
ಇತ್ತೀಚೆಗೆ ನನ್ನ ಪತಿ ಮತಪಟ್ಟಿದ್ದು, ನನಗೆ ಇಬ್ಬರು ಮಕ್ಕಳಿದ್ದಾರೆ. ಅದರಲ್ಲಿ ಒಬ್ಬ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಇದರ ಮಧ್ಯೆ ನಿನ್ನ ಪತಿಗೆ ಹಣ ಕೊಟ್ಟಿದ್ದೇವೆ ಎಂದು ಪೀಡಿಸಿ, ನನ್ನ ಬಳಿ ಇದ್ದ ಹಣವನ್ನೆಲ್ಲ ವಸೂಲಿ ಮಾಡಿದ್ದಾರೆ. ಇನ್ನೂ ಹಣ ಕೊಡಬೇಕೆಂದು ಒತ್ತಾಯಿಸಿ, ಬಡ್ಡಿ ದಂಧೆಕೋರರು ಮನೆಗೆ ಬಂದು ಪೀಡಿಸುತ್ತಿದ್ದಾರೆ. ಗ್ರಾಮದಲ್ಲಿರುವ ಬಾಡಿಗೆ ಮನೆಯನ್ನು ಸಹ ಬಿಡಿಸಿದ್ದಾರೆ. ಈ ಕುರಿತು ಪೋಲಿಸರಿಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲು ಹೋದರೂ ಸ್ವೀಕರಿಸುತ್ತಿಲ್ಲ. ನಾವು ಅನಿವಾರ್ಯವಾಗಿ ಗ್ರಾಮದ ಜಮೀನಿನ ಶೆಡ್​ನಲ್ಲಿ ವಾಸಿಸುತ್ತಿದ್ದೇವೆ. ರಸ್ತೆಯಲ್ಲಿ ಹೋಗುತ್ತಿರುವಾಗ ನನನ್ನು ಅಡ್ಡಗಟ್ಟಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಬೇರೆ ದಾರಿಯಿಲ್ಲದೇ ಹಣ ವಸೂಲಿಗೆ ಮುಂದಾಗಿರುವ ಬಡ್ಡಿ ದಂಧೆಕೋರರ ಹೆಸರು ಬರೆದಿಟ್ಟು ವಿಷ ಸೇವಿಸುವುದಾಗಿ ಮಹಿಳೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net