ಗೂಳಿ ಇರಿದು ಮಹಿಳೆಗೆ ಗಂಭೀರ ಗಾಯ

ಗೂಳಿ
ಗೂಳಿ
Published on
ಸವದತ್ತಿ: ತಾಲೂಕಿನ ಯಲ್ಲಮ್ಮ ಗುಡ್ಡದಲ್ಲಿ ಗೂಳಿ ಇರಿತದಿಂದ ಸುತಗಟ್ಟಿ ಗ್ರಾಮದ ಮಹಾದೇವಿ ಪಟಾತ (59) ಗಂಭೀರ ಗಾಯಗೊಂಡು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಮಂಗಳವಾರ ನಡೆದಿದೆ. ಯಲ್ಲಮ್ಮ ಗುಡ್ಡದಲ್ಲಿ ದೇವರ ದರ್ಶನಕ್ಕೆಂದು ತೆರಳುತ್ತಿದ್ದ ವೇಳೆ ಮಹಾದೇವಿಗೆ ಗೂಳಿ ಗುದ್ದಿ ಗಾಯಗೊಳಿಸಿದೆ.
ರಕ್ತಸ್ರಾವವಾಗುತ್ತಿದ್ದಂತೆ ಸ್ಥಳದಲ್ಲಿದ್ದ ಭಕ್ತರು ಸವದತ್ತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮತ್ತೊಂದು ಘಟನೆಯಲ್ಲಿ ನವಲಗುಂದ ಹಳೇ ಕುಸುಗಲ್ಲದ ಚಾನಕೋಟಿ, ಉಗರಗೋಳದ ದೂಳನ್ನವರ ಹಾಗೂ ಶೆಟ್ಟವ್ವ ಕಾಳನ್ನವರ ಅವರಿಗೆ ಸಹ ಗೂಳಿ ದಾಳಿಯಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಎಚ್. ಮಲ್ಲನಗೌಡ್ರ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net