ಬೆಳಗಾವಿ: ನಿಯಂತ್ರಣ ತಪ್ಪಿದ ಬೈಕ್ ಮೇಲಿಂದ ಬಿದ್ದ ಮಹಿಳೆ ಮೇಲೆ ಬಸ್ ಹಾಯ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಮಿನಭಾವಿ ಗ್ರಾಮದ ಬಳಿ ಗೋಟೂರ-ವಿಜಯಪುರ ರಸ್ತೆಯಲ್ಲಿ ಭಾನುವಾರ ನಡೆದಿದೆ.
ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಸುವರ್ಣ ಮಲ್ಲಪ್ಪ ಮೋನೆ (37) ಮೃತ ಮಹಿಳೆ. ಬೈಕ್ ಮೇಲೆ ಚಿಕ್ಕೋಡಿ ಕಡೆಯಿಂದ ಬೆಳಗಾವಿ ಕಡೆಗೆ ಹೋಗುತ್ತಿದ್ದಾಗ ಅಪಘಾತವಾಗಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡಿದ್ದ ಮಹಿಳೆ ಸಾವು: ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಬಳಿ ೆ.5ರಂದು ನಡೆದಿದ್ದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ದುರದುಂಡಿ ಗ್ರಾಮದ ಲಕ್ಕವ್ವ ಅಂತರಗಟ್ಟಿ (55) ಚಿಕಿತ್ಸೆಗೆ ಸ್ಪಂದಿಸದೆ ಗೋಕಾಕ ಆಸ್ಪತ್ರೆಯಲ್ಲಿ ಶನಿವಾರ ಮತಪಟ್ಟಿದ್ದಾರೆ.