ಗುರುವಿನ ಅನುಗ್ರಹದಿಂದ ಸಂಕಷ್ಟ ದೂರ

ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯರು, ರಾಮದುರ್ಗದ ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ, ಬಸವರಾಜ ಚಿಕ್ಕಮಠ, ಸಿದ್ದಪ್ಪ ಪೂಜಾರ ಇತರರಿದ್ದರು. ಎಸ್.ಎ.ಜಾಮದಾರ ಚಂದ್ರಶೇಖರ ಸೊಬರದ ನಿರೂಪಿಸಿದರು.
ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯರು, ರಾಮದುರ್ಗದ ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ, ಬಸವರಾಜ ಚಿಕ್ಕಮಠ, ಸಿದ್ದಪ್ಪ ಪೂಜಾರ ಇತರರಿದ್ದರು. ಎಸ್.ಎ.ಜಾಮದಾರ ಚಂದ್ರಶೇಖರ ಸೊಬರದ ನಿರೂಪಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಮತ
  • ಮೌನ ಲಿಂಗಾನುಷ್ಠಾನ ಮಹಾಮಂಗಲೋತ್ಸವ
ರಾಮದುರ್ಗ: ಹರ ಮುನಿದರೂ ಗುರು ಕಾಯುವ ಎಂಬಂತೆ ಗುರು ಮಾರ್ಗದರ್ಶನದಿಂದ ಬದುಕಿನ ಸಂಕಷ್ಟಗಳು ದೂರವಾಗಲು ಸಾಧ್ಯ ಎಂದು ಗದಗ-ಡಂಬಳ, ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಕಲ್ಲೂರ ಸಿದ್ಧೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಶಿರೋಳ ತೋಂಟದಾರ್ಯ ಮಠ ಹಾಗೂ ಬೈರನಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ 31 ದಿನಗಳವರೆಗೆ ಕೈಗೊಂಡ 17ನೇ ವರ್ಷದ ಮೌನ ಲಿಂಗಾನುಷ್ಠಾನ ಮಹಾಮಂಗಲೋತ್ಸವದಲ್ಲಿ ಮಾತನಾಡಿದರು.
ಅನುಷ್ಠಾನದಿಂದ ಆತ್ಮಬಲ ಹೆಚ್ಚಿಸಿಕೊಳ್ಳಬೇಕು. ಆತ್ಮಕಲ್ಯಾಣವಿಲ್ಲದೆ ಲೋಕ ಕಲ್ಯಾಣ ಸಾಧ್ಯವಿಲ್ಲ. ಧರ್ಮ ಗುರುಗಳು ಅನುಷ್ಠಾನದಿಂದ ಪಡೆದ ಶಕ್ತಿಯಿಂದ ಭಕ್ತರ ಕಲ್ಯಾಣವಾಗಲು ಸಾಧ್ಯ. ಶಾಂತಲಿಂಗ ಸ್ವಾಮೀಜಿ ಅನುಷ್ಠಾನದಿಂದ ಕ್ಷೇತ್ರದಲ್ಲಿ ದೈವಬಲ ಹೆಚ್ಚಲಿದೆ ಎಂದರು.
ಮೌನ ಅನುಷ್ಠಾನ ಕೈಗೊಂಡಿದ್ದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಶಿಕ್ಷಣ, ಸಂಸ್ಕೃತಿ ಹಾಗೂ ಸಂಸ್ಕಾರ ವೃದ್ಧಿ ಹಾಗೂ ಕಾರ್ಯಸಿದ್ಧಿಗೆ ತೋಂಟದ ಸಿದ್ಧಲಿಂಗ ಸ್ವಾಮೀಜಿ, ಸಿದ್ಧರಾಮ ಸ್ವಾಮೀಜಿ ಮಾರ್ಗದರ್ಶನ ಮುಖ್ಯವಾಗಿದೆ. ಅನುಷ್ಠಾನಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿದ ಕಲ್ಲೂರ ಸಿದ್ಧೇಶ್ವರ ಕ್ಷೇತ್ರದ ಟ್ರಸ್ಟ್ ಕಮಿಟಿ ಹಾಗೂ ಸುತ್ತಮುತ್ತಲಿನ ಭಕ್ತರ ಕಾರ್ಯ ಶ್ಲಾಘನೀಯ ಎಂದರು.
ಇದೇ ವೇಳೆ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿಗೆ ವಚನ ಭೋಧನ ಮಾಡುವ ಮೂಲಕ ಮೌನ ಅನುಷ್ಠಾನ ಮುಕ್ತಾಯಗೊಳಿಸಲಾಯಿತು. ಚಿಪ್ಪಲಕಟ್ಟಿ ಬ್ರಹನ್ಮಠದ ಚಂದ್ರಶೇಖರ ಸ್ವಾಮೀಜಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಸದಸ್ಯ ಪ್ರೊ.ಶಶಿಧರ ತೋಡಕರ, ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂದ್ರಶೇಖರ ಮಟಿ ಅಡಿವೆಪ್ಪ ಮನವಿ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net