ಪಿಒಪಿ ಮೂರ್ತಿಗೆ ಕಡಿವಾಣ ಯಾವಾಗ?

ಬೆಳಗಾವಿಯ ಜಕ್ಕೇರಿ ಹೊಂಡದಲ್ಲಿ ಕಳೆದ ವರ್ಷದ ಮೂರ್ತಿಗಳ ತ್ಯಾಜ್ಯ ತೆರವುಗೊಳಿಸದ ಕಾರಣ ನೀರು ಮಲೀನಗೊಂಡಿರುವುದು.
ಬೆಳಗಾವಿಯ ಜಕ್ಕೇರಿ ಹೊಂಡದಲ್ಲಿ ಕಳೆದ ವರ್ಷದ ಮೂರ್ತಿಗಳ ತ್ಯಾಜ್ಯ ತೆರವುಗೊಳಿಸದ ಕಾರಣ ನೀರು ಮಲೀನಗೊಂಡಿರುವುದು.
Published on
ಡಿ.ವಿ.ಕಮ್ಮಾರ ಬೆಳಗಾವಿ
ಪರಿಸರ ಹಾಗೂ ಜಲಮೂಲಕ್ಕೆ ಕಂಟಕವಾಗಿರುವ ಪ್ಲಾಸ್ಟರ್ ಆ್ ಪ್ಯಾರಿಸ್ (ಪಿಒಪಿ) ಮೂರ್ತಿಗೆ ರಾಜ್ಯದಲ್ಲಿ ನಿಷೇಧವಿದ್ದರೂ, ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಕಾನೂನು ಜಾರಿಗೆ ಬರುತ್ತಿಲ್ಲ. ಗಣೇಶ ಹಬ್ಬಕ್ಕೆ ಮೂರು ತಿಂಗಳ ಮುಂಚೆಯೇ ಪಿಒಪಿ ಮೂರ್ತಿ ತಯಾರಿಕೆ ವಿರುದಟಛಿ ಕ್ರಮ ಕೈಗೊಳ್ಳಬೇಕಿತ್ತು. ಇದುವರೆಗೂ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿಲ್ಲ. ಹೀಗಾಗಿ, ಈ ಬಾರಿಯೂ ಪಿಒಪಿ ಮೂರ್ತಿಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ಮನವಿಗಿಲ್ಲ ಸ್ಪಂದನೆ: ಪಿಒಪಿ ಮೂರ್ತಿಗಳಿಂದ ಪ್ರತಿ ವರ್ಷ ಜಲಮೂಲಗಳು ವಿಷಕಾರಿಯಾಗುತ್ತಿವೆ. ಇದರ ನಿಗ್ರಹಕ್ಕೆ ಪರಿಸರ ಪ್ರೇಮಿಗಳು ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜವಾಗುತ್ತಿಲ್ಲ. ‘ಮುಂದಿನ ವರ್ಷ ಕಡಿವಾಣ ಹಾಕಲಾಗುವುದು’ ಎಂಬ ಭರವಸೆ ನೀಡುವ ಅಧಿಕಾರಿಗಳು, ಎಚ್ಚೆತ್ತುಕೊಳ್ಳುವುದು ಮಾತ್ರ ಹಬ್ಬದ ಸಿದಟಛಿತೆ ಮುಗಿದಾಗ. ಅದಾಗಲೇ ಪಿಒಪಿ ಮೂರ್ತಿಗಳ ನಿರ್ಮಾಣ ಹಾಗೂ ಮಾರಾಟ ಮುಗಿದೇ ಹೋಗಿರುತ್ತದೆ.
ಕಾಗದದಲ್ಲಷ್ಟೆ ಕಾನೂನು: ಈ ಬಾರಿಯ ಗಣೇಶೋತ್ಸವ ಸೆ.14ಕ್ಕೆ ಬಂದಿದ್ದು, ಈ ಕುರಿತು ಜಿಲ್ಲಾಡಳಿತ ಮೂರ್ತಿ ತಯಾರಿಕೆಗೆ ಸಂಬಂಧಿಸಿದಂತೆ ಕಳೆದ ಜನವರಿಯಲ್ಲಿ ಸಭೆ ಮಾಡಿತ್ತು. ಈ ವೇಳೆ ಪರಿಸರ ಸ್ನೇಹಿ ಮೂರ್ತಿಕಾರರು ವಿವಿಧ ಬೇಡಿಕೆ ಮಂಡಿಸಿದ್ದರು. ಇದಾದ ಬಳಿಕ ಮತ್ತೊಂದು ಸಭೆ ನಡೆಸಬೇಕಿತ್ತು. ಆದರೆ, ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದನ್ನು ಮರೆತಿರುವುದರಿಂದ ಪರಿಣಾಮ ಈ ಸಲವೂ ಪರಿಸರ ಸ್ನೇಹಿ ಗಣೇಶೋತ್ಸವ ಕಾಗದದ ಮೇಲಷ್ಟೇ ಜಾರಿಗೆ ಬರಲಿದೆ.
ರಾಜ್ಯ ವಿವಿಧೆಡೆ ಪೂರೈಕೆ: ಈಗಾಗಲೇ ಮಹಾರಾಷ್ಟ್ರದಿಂದ ಬಣ್ಣ ರಹಿತ ಪಿಒಪಿ ಮೂರ್ತಿಗಳನ್ನು ಜಿಲ್ಲೆಯ 30ಕ್ಕೂ ಹೆಚ್ಚು ಗೋದಾಮುಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಇವುಗಳಿಗೆ ಬಣ್ಣ ಕೊಟ್ಟು, ಬಳಿಕ 200ಕ್ಕೂ ಹೆಚ್ಚು ಮಾರಾಟಗಾರರಿಗೆ ವಿತರಿಸಲಾಗುತ್ತದೆ. ಇಲ್ಲಿಂದಲೇ ಧಾರವಾಡ, ಹಾವೇರಿ, ಗದಗ, ದಾವಣಗೆರೆ ಜಿಲ್ಲೆಗಳಿಗೂ ಪೂರೈಕೆಯಾಗುತ್ತವೆ. ಜಿಲ್ಲೆಯಲ್ಲಿ ಸುಮಾರು ಬೆರಳೆಣಿಕೆಯಷ್ಟೆ ಪರಿಸರ ಸ್ನೇಹಿ ಮೂರ್ತಿಕಾರರನ್ನು ಬಿಟ್ಟರೆ, ಉಳಿದಂತೆ ಎಲ್ಲರೂ ಪಿಒಪಿ ಮೂರ್ತಿ ಮಾರಾಟಗಾರರಿದ್ದಾರೆ. ಒಟ್ಟಾರೆ, ಈ ಸಲವೂ ಪಿಒಪಿ ಮೂರ್ತಿಗಳ ಹಾವಳಿಗೆ ಕಡಿವಾಣ ಬೀಳುವ ಲಕ್ಷಣ ಗೋಚರಿಸುತ್ತಿಲ್ಲ.
ಸದ್ಯ ಹತ್ತಿಪ್ಪತ್ತು ಜನ ಮಾತ್ರ ಪರಿಸರ ಸ್ನೇಹಿ ಮೂರ್ತಿ ಕಲಾಕಾರರು ಉಳಿದುಕೊಂಡಿದ್ದೇವೆ. ಪಿಒಪಿಯಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದರೂ ಕ್ರಮ ಕೈಗೊಳ್ಳಲಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಮೂರ್ತಿ ಕಲಾವಿದರೆಲ್ಲ, ಪಿಒಪಿ ಮೂರ್ತಿ ಮಾರಾಟಗಾರರಾಗಿ ಬದಲಾಗುವ ದುಃಸ್ಥಿತಿ ಬಂದಿದೆ.
ಪರಶುರಾಮ ಪಾಲಕರ ಮಣ್ಣಿನ ಮೂರ್ತಿಕಾರ
ತೆರವುಗೊಂಡಿಲ್ಲ ಕಳೆದ ವರ್ಷದ ತ್ಯಾಜ್ಯ ಕಳೆದ ವರ್ಷ ಗಣೇಶ ಉತ್ಸವದಲ್ಲಿ ಪಿಒಪಿ ಮೂರ್ತಿಗಳ ವಿಸರ್ಜನೆಯಿಂದ ತುಂಬಿ ಹೋಗಿದ್ದ ಬೆಳಗಾವಿಯ ಜಕ್ಕೇರಿ ಹೊಂಡದಲ್ಲಿನ ತ್ಯಾಜ್ಯ ಈವರೆಗೂ ತೆರವುಗೊಳಿಸಿಲ್ಲ. ಇದರಿಂದ ನೀರು ಹಸಿರು ವರ್ಣಕ್ಕೆ ತಿರುಗಿ ದುರ್ವಾಸನೆ ಹರಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net