ವೀರರಾಣಿ ಬೆಳವಡಿ ಮಲ್ಲಮ್ಮ ಜ್ಯೋತಿಗೆ ಸ್ವಾಗತ

ಬೆಳಗಾವಿಗೆ ಶುಕ್ರವಾರ ಆಗಮಿಸಿದ ಬೆಳವಡಿ ಮಲ್ಲಮ್ಮ ವೀರಜ್ಯೋತಿಯನ್ನು ಮೇಯರ್ ಮಂಗೇಶ ಪವಾರ ಸ್ವಾಗತಿಸಿಕೊಂಡರು. ವಿದ್ಯಾವತಿ ಭಜಂತ್ರಿ, ಕಸ್ತೂರಿ ಬಾವಿ ಇತರರಿದ್ದರು.
ಬೆಳಗಾವಿಗೆ ಶುಕ್ರವಾರ ಆಗಮಿಸಿದ ಬೆಳವಡಿ ಮಲ್ಲಮ್ಮ ವೀರಜ್ಯೋತಿಯನ್ನು ಮೇಯರ್ ಮಂಗೇಶ ಪವಾರ ಸ್ವಾಗತಿಸಿಕೊಂಡರು. ವಿದ್ಯಾವತಿ ಭಜಂತ್ರಿ, ಕಸ್ತೂರಿ ಬಾವಿ ಇತರರಿದ್ದರು.
Published on
ಬೆಳಗಾವಿ: ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವದ ಪ್ರಯುಕ್ತ ನಗರಕ್ಕೆ ಶುಕ್ರವಾರ ಆಗಮಿಸಿದ ವೀರಜ್ಯೋತಿಯನ್ನು ಸ್ವಾಗತಿಸಿ, ಅದ್ದೂರಿಯಾಗಿ ಬಿಳ್ಕೋಡಲಾಯಿತು.
ಮಲ್ಲಮ್ಮನ ತವರೂರಾದ ಶಿರಸಿಯ ಸೋಂದಾದಿಂದ ಹೊರಟ ವೀರಜ್ಯೋತಿಯನ್ನು ನಗರದ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಮಹಾಪೌರ ಮಂಗೇಶ ಪವಾರ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿಕೊಂಡರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಇತರರಿದ್ದರು.
ಶನಿವಾರ(ಫೆ.28), ಮಾ.1 ರಂದು ಬೆಳವಡಿ ಮಲ್ಲಮ್ಮ ಉತ್ಸವ ಜರುಗಲಿದ್ದು, ಈ ಹಿನ್ನಲೆಯಲ್ಲಿ ಬೆಳವಡಿ ಮಲ್ಲಮ್ಮ ವೀರಜ್ಯೋತಿಯು ಮಲ್ಲಮ್ಮಳ ತವರೂರಾದ ಶಿರಸಿಯ ಸೋಂದಾದಿಂದ ಹೊರಟು ಯಲ್ಲಾಪೂರ, ಹಳಿಯಾಳ, ಅಳ್ನಾವರ, ಖಾನಾಪುರ, ಬೆಳಗಾವಿ, ಬೈಲಹೊಂಗಲ ಮಾರ್ಗವಾಗಿ ಅನಗೋಳ, ನಯಾನಗರ, ಸಂಗೋಳ್ಳಿ, ಪಟ್ಟಿಹಾಳ ಕೆ.ಬಿ, ಸಿದ್ಧಸಮುದ್ರ ಮಠಕ್ಕೆ ಆಗಮಿಸಿ ಶನಿವಾರ ಬೆಳಗ್ಗೆ 10 ಗಂಟೆಗೆ ಬೆಳವಡಿ ತಲುಪಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net