ನೇಕಾರರಿಂದ ವಿದ್ಯುತ್ ಬಿಲ್ ಆಕರಣೆಗೆ ಆಕ್ರೋಶ

ವಿದ್ಯುತ್ ಬಿಲ್ ಆಕರಣೆ ತಡೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಶುಕ್ರವಾರ ಹೆಸ್ಕಾಂ ಅಧಿಕಾರಿಗೆ ನೇಕಾರರು ಮನವಿ ಸಲ್ಲಿಸಿದರು. ಗಜಾನನ ಗುಂಜೇರಿ, ಲೋಹಿತ ಮೊರಕರ, ಆನಂದ ಉಪರಿ, ನಾರಾಯಣ ಲೋಕರೆ, ವಿನಾಯಕ ಕಾಮಕರ ಇತರರಿದ್ದರು.
ವಿದ್ಯುತ್ ಬಿಲ್ ಆಕರಣೆ ತಡೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಶುಕ್ರವಾರ ಹೆಸ್ಕಾಂ ಅಧಿಕಾರಿಗೆ ನೇಕಾರರು ಮನವಿ ಸಲ್ಲಿಸಿದರು. ಗಜಾನನ ಗುಂಜೇರಿ, ಲೋಹಿತ ಮೊರಕರ, ಆನಂದ ಉಪರಿ, ನಾರಾಯಣ ಲೋಕರೆ, ವಿನಾಯಕ ಕಾಮಕರ ಇತರರಿದ್ದರು.
Published on
ಬೆಳಗಾವಿ : ನೇಕಾರರ ಮಗ್ಗಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಉಚಿತ ವಿದ್ಯುತ್ ಯೋಜನೆ ಜಾರಿಯಲ್ಲಿದ್ದಾಗಲೂ, ಇತರೆ ಕಾಲಂ ಮೂಲಕ ಬಿಲ್ ಆಕರಣೆ ಮಾಡಲಾಗುತ್ತಿದ್ದು, ಅದನ್ನು ತಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನೆಹರು ನಗರದಲ್ಲಿನ ಹೆಸ್ಕಾಂ ಕಚೇರಿ ಎದುರು ಪ್ರತಿಭಟಿಸಿದ ನೇಕಾರರು ಈ ಸಂಬಂಧದ ಮನವಿಯೊಂದನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿ, ಇತರೆ ಕಾಲಂ ನಲ್ಲಿ ಹೆಚ್ಚುವರಿ ಹಣ ಪಾವತಿ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ನೇಕಾರರ ವೃತ್ತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ 10ಎಚ್‌ಪಿವರೆಗೆ ಉಚಿತ ಹಾಗೂ 11ರಿಂದ 20 ಎಚ್‌ಪಿವರೆಗೆ ಪ್ರತಿ ಯುನಿಟ್‌ಗೆ 1.25ರೂ. ವಿದ್ಯುತ್ ದರ ಆಕರಣೆ ಮಾಡುವ ಯೋಜನೆ ಜಾರಿಗೆ ತಂದಿದೆ. ಇದು ನೇಕಾರರಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ಸಹಾಯವಾಗಿದೆ. ಈಚೆಗೆ ಹೊರ ರಾಜ್ಯದ ಪೈಪೋಟಿ, ಕಚ್ಚಾವಸ್ತುಗಳ ಬೆಲೆ ಏರಿಕೆ, ಮಾರುಕಟ್ಟೆ ಕುಸಿತ ಹಲವಾರು ಸವಾಲುಗಳನ್ನು ಎದುರಿಸುತ್ತಾ ಉದ್ಯೋಗ ಮುಂದೆ ಸಾಗುತ್ತಿದೆ. ಇಂತಹ ಇಂತಹ ಸಂದರ್ಭದಲ್ಲಿ ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಿ ಇತರೆ ಕಾಲಂ ಮೂಲಕ ವಸೂಲಿ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದ ಜಿಲ್ಲಾ ಅಧ್ಯಕ್ಷ ಗಜಾನನ ಗುಂಜೇರಿ, ಆನಂದ ಉಪರಿ, ನಾರಾಯಣ ಲೋಕರೆ, ಲೋಹಿತ ಮೊರಕೇರ, ವಿನಾಯಕ ಕಾಮಕರ, ಕಲ್ಲಪ್ಪ ಕಾಂಬಳೆ, ವಿನೋದ ಬಂಗೋಡಿ, ವಿನಾಯಕ ದುದಾಣಿ, ಮೋಹನ ಸರವದೆ, ಮಂಜುನಾಥ ನಂದಿಕೋಲ, ಬಸವರಾಜ ಢವಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net