ಸ್ಥಳೀಯ ತಾಪಂ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಣಗಲಾ ಭಾಗದ ಶಿಪ್ಪೂರ, ಹಡಲಗಾ, ನೇರಲಿ ಆಶ್ರ್ರಯ ಕಾಲನಿ, ಹುಕ್ಕೇರಿ ಪೂರ್ವಭಾಗದ ಹುಲ್ಲೋಳಿ ಹಟ್ಟಿ, ರಕ್ಷಿ ಮೊದಲಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು. ತಾಲೂಕು ಆಡಳಿತ ಅಂಥ ಗ್ರಾಮಗಳನ್ನು ಗುರುತಿಸಿ ನೀರಿನ ಸರಬರಾಜಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಂತೋಷಗೌಡ ಪಾಟೀಲ ಬಳಿ ತೊಂದರೆ ತಿಳಿಸಿದಾಗ ಬರಿ ಸಬೂಬು ಹೇಳುತ್ತಾರೆ, ಹೊರತು ಯಾವುದೇ ಕೆಲಸ ಮಾಡುವುದಿಲ್ಲ. ಈ ವರ್ತನೆ ಮುಂದುವರಿದಲ್ಲಿ ಕ್ರಮ ಕೈಗೊಳುವುದಾಗಿ ಎಚ್ಚರಿಸಿದರು.