ಚಿಕ್ಕೋಡಿ: ಕಳೆದೆರಡು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ನ್ಯಾಯಾಲಯದ ಆವರಣ ಮಳೆ ನೀರಿನಿಂದ ತುಂಬಿದೆ. ಶನಿವಾರ ನ್ಯಾಯಾಲಯಕ್ಕೆ ಆಗಮಿಸಿದ್ದ ಸಾರ್ವಜನಿಕರು, ವಕೀಲರು ವಾಹನ ದಾಟಿಸಿಕೊಂಡು ಬರಲು ಹರಸಾಹಸಪಟ್ಟರು.
ಚಿಕ್ಕೋಡಿ ೭ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸುತ್ತಮುತ್ತ ಸ್ವಚ್ಛತೆ ಮರೀಚಿಕೆಯಾಗಿದೆ. ಒಳಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆ ನೀರು ಹರಿಯದೆ ನ್ಯಾಯಾಲಯ ಆವರಣದಲ್ಲಿ ತುಂಬಿಕೊಂಡು ಕೆರೆಯಂತೆ ಕಾಣುತ್ತಿತ್ತು. ಬಳಿಕ ಮಣ್ಣು ಅಗೆಯುವ ಯಂತ್ರದ ಮೂಲಕ ನೀರು ಹೊರಹಾಕುವ ಕಾರ್ಯ ನಡೆಯಿತು.