ನಗರದ ಪಾಲಿಕೆ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್‌ಐಆರ್ ಶೇ.100ರಷ್ಟು ಪೂರ್ಣಗೊಳಿಸಿರುವ ಬೂತ ಮಟ್ಟದ ಅಧಿಕಾರಿ (ಬಿಎಲ್‌ಒ) ಸತೀಶ ಡವಳೆ, ಎಸ್.ಜಿ.ಕವಳೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಳಗಾವಿ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಎಸ್‌ಐಆರ್ ಅರ್ಜಿಗಳನ್ನು ನೀಡಲಾಗಿದೆ. ಆದರೆ, ಅರ್ಧದಷ್ಟು ಜನರು ಭರ್ತಿ ಮಾಡಿದ ಅರ್ಜಿಗಳನ್ನು ವಾಪಸ್ ನೀಡದೆ ನಿರ್ಲಕ್ಷೃ ಮಾಡುತ್ತಿದ್ದಾರೆ. ಇದರಿಂದಾಗಿ ಡಿಜಿಟಲೀಕರಣ ಮಾಡುವುದು ಬಾಕಿ ಉಳಿದುಕೊಂಡಿದೆ ಎಂದರು.