ರಾಯಬಾಗ: ಚುನಾವಣೆ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಎಲ್ಲ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ವಕೀಲ ಎಂ.ಎಸ್.ಪೂಜೇರಿ ಹೇಳಿದರು.
ನಂದಿಕುರಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ತೀವ್ರ ಪರಿಷ್ಕರಣೆಯ ಅರಿವು ಕಾರ್ಯಾಗಾರದಲ್ಲಿ ಮಾತನಾಡಿ, ಎಸ್‌ಐಆರ್ ಸಮೀಕ್ಷೆಯಲ್ಲಿ ಪ್ರತಿಯೊಬ್ಬ ವಯಸ್ಕ ನಾಗರಿಕರು ಭಾಗವಹಿಸುವುದರ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಬೇಕೆಂದು ಹೇಳಿದರು.
ಸಿಆರ್‌ಪಿ ವೈ.ಕೆ.ಭಜಂತ್ರಿ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಆಗಸ್ಟ್ 8ರವರೆಗೆ ಇದ್ದು, ಚುನಾವಣೆ ಆಯೋಗದಿಂದ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ ನಾಗರಿಕರು ಸಹಕರಿಸಬೇಕು. ರೆನ್ಯುಮರೇಷನ್ ಾರ್ಮ್ ಪಡೆದು ಸರಿಯಾದ ಮಾಹಿತಿ ತುಂಬಿ ಬಿಎಲ್‌ಒಗೆ ನೀಡಬೇಕು. ಇದರ ಬಗ್ಗೆ ನಾಗರಿಕರು ನಿರ್ಲಕ್ಷೃ