ವಿಷನ್ ಕರ್ನಾಟಕ-2 ಜಾಗೃತಿ ಪ್ರದರ್ಶನ ಇಂದಿನಿಂದ

ಬೆಳಗಾವಿ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಂಸದ ಜಗದೀಶ ಶೆಟ್ಟರ ಮಾತನಾಡಿದರು, ಪ್ರೀತಿ ಕಾಮಕರ, ಹನುಮಂತ ಕೊಂಗಾಲಿ, ಸಂಜಯ ಪಾಟೀಲ, ಅನಿಲ ಬೆನಕೆ, ಸುಭಾಸ ಪಾಟೀಲ, ವನೀಶ ಗುಪ್ತಾ ಇತರರಿದ್ದರು.
ಬೆಳಗಾವಿ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಂಸದ ಜಗದೀಶ ಶೆಟ್ಟರ ಮಾತನಾಡಿದರು, ಪ್ರೀತಿ ಕಾಮಕರ, ಹನುಮಂತ ಕೊಂಗಾಲಿ, ಸಂಜಯ ಪಾಟೀಲ, ಅನಿಲ ಬೆನಕೆ, ಸುಭಾಸ ಪಾಟೀಲ, ವನೀಶ ಗುಪ್ತಾ ಇತರರಿದ್ದರು.
Published on
ಬೆಳಗಾವಿ: ಕೃಷಿ, ಆರ್ಥಿಕ, ತಂತ್ರಜ್ಞಾನ, ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ತಾಂತ್ರಿಕ ನಾವೀನ್ಯಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವ ಉದ್ದೇಶದಿಂದ ಜೂ.23ರಿಂದ 25ರವರೆಗೆ ವಿಷನ್ ಕರ್ನಾಟಕ-2 ಜಾಗೃತಿ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಸದ ಜಗದೀಶ ಶೆಟ್ಟರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೆಎಲ್‌ಇ ಕನ್ವೆನ್ಷನ್ ಸೆಂಟಿನರಿ ಡಾ.ಬಿ.ಎಸ್.ಜೀರಿಗೆ ಸಭಾಂಗಣದಲ್ಲಿ ಜೂ.24ರಂದು ನಡೆಯುವ ಮೂರು ದಿನಗಳ ಪ್ರದರ್ಶನದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಕೈಗಾರಿಕೆಗಳು, ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಪ್ರತಿನಿಧಿಗಳೊಂದಿಗೆ ನೇರವಾಗಿ ವ್ಯವಹರಿಸಲು ನಾಗರಿಕರಿಗೆ ಅನನ್ಯ ಅವಕಾಶ ಒದಗಿಸುತ್ತಿದೆ. ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಭವಿಷ್ಯದ ಬೆಳಗಾವಿ ಯಾವ ರೀತಿ ಅಭಿವೃದ್ಧಿ ಹೊಂದಬೇಕು ಮತ್ತು ಮೂಲ ಸೌಕರ್ಯ ಕಲ್ಪಿಸುವ ‘್ಯೂಚರ್ ಆಫ್ ಬೆಳಗಾವಿ-47’ ಕುರಿತು ಸಂವಾದ ನಡೆಯಲಿದೆ. ಅಭಿವೃದ್ಧಿ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಕೊನೆಯ ದಿನ ಬೆಳಗಾವಿ ನಗರ ಅಭಿವೃದ್ಧಿ ಕುರಿತು ಹಲವು ರೀತಿಯ ನಿರ್ಣಯ ಕೈಗೊಂಡು ಸರ್ಕಾರಗಳಿಗೆ ಸಲ್ಲಿಸಲಾಗುವುದು. ಕಳೆದ ವರ್ಷದ ಮಿಷನ್ ಕರ್ನಾಟಕ ಜಾಗೃತಿ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ದೊರೆತಿತ್ತು. ಈ ಬಾರಿ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.
ಈ ಬಾರಿ ಜಾಗೃತಿ ಪ್ರದರ್ಶನದಲ್ಲಿ ಶಿಕ್ಷಣ, ಆರೋಗ್ಯ, ಕೈಗಾರಿಕೆ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳ ಅನುಷ್ಠಾನ. ಹೊಸ ಯೋಜನೆಗಳ ಸಿದ್ಧತೆ ಕುರಿತು ಮಾಹಿತಿ ಪ್ರದರ್ಶನಗೊಳ್ಳಲಿದೆ. ಕೈಗಾರಿಕೆ, ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಗಣ್ಯರು ಭಾಗವಹಿಸಿ ತಮ್ಮ ಅನುಭವಗಳ ಜತೆಗೆ ಹೊಸ ಆವಿಷ್ಕಾರ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.
ಮೇಯರ್ ಪ್ರೀತಿ ಕಾಮಕರ, ಉಪಮೇಯರ್ ಹನುಮಂತ ಕೊಂಗಾಲಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಮುಖಂಡ ಮುರುೇಂದ್ರಗೌಡ ಪಾಟೀಲ, ಪ್ರಯಾಸ್ ಸಂಸ್ಥೆ ನಿರ್ದೇಶಕ ವನೀಶ ಗುಪ್ತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net