ನೀರು ದುರುಪಯೋಗ ತಡೆಗೆ ಗ್ರಾಮಸ್ಥರ ಆಗ್ರಹ

ಬೆಳಗಾವಿ ಎಸ್ಪಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದ ಹೆಬ್ಬಾಳ ಗ್ರಾಮಸ್ಥರು ಕುಡಿಯುವ ನೀರಿನ ದುರುಪಯೋಗ ತಡೆಗೆ ಆಗ್ರಹಿಸಿದರು. ರಾವಸಾಹೇಬ ಪಾಟೀಲ, ಸಚಿನ ಕಾಗಲಕರ, ಪದ್ಮರಾಜ ಪಾಟೀಲ, ದುಂಡಪ್ಪ ಮುನ್ನೋಳಿ ಇತರರಿದ್ದರು.
ಬೆಳಗಾವಿ ಎಸ್ಪಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದ ಹೆಬ್ಬಾಳ ಗ್ರಾಮಸ್ಥರು ಕುಡಿಯುವ ನೀರಿನ ದುರುಪಯೋಗ ತಡೆಗೆ ಆಗ್ರಹಿಸಿದರು. ರಾವಸಾಹೇಬ ಪಾಟೀಲ, ಸಚಿನ ಕಾಗಲಕರ, ಪದ್ಮರಾಜ ಪಾಟೀಲ, ದುಂಡಪ್ಪ ಮುನ್ನೋಳಿ ಇತರರಿದ್ದರು.
Published on
ಬೆಳಗಾವಿ: ಹಿಡಕಲ್ ಜಲಾಶಯದ ಬಹುಗ್ರಾಮ ಕುಡಿಯುವ ನೀರಿನ ಪೈಪ್‌ಲೈನ್ ಏರ್‌ವಾಲ್ ಲೀಕ್ ಮಾಡಿ, ನೀರು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು. ಗ್ರಾಮಕ್ಕೆ ಇದೇ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ, ಕೆಲವರು ಈ ಪೈಪ್‌ಲೈನ್ ಮಾರ್ಗದಲ್ಲೇ ಸೋರಿಕೆ ಆಗುವಂತೆ ಮಾಡಿ, ಅಲ್ಲಿಂದ ಅನಧಿಕೃತ ಪೈಪ್‌ಲೈನ್ ಅಳವಡಿಸಿ ತಮ್ಮ ಕೃಷಿ ಜಮೀನುಗಳಿಗೆ ನೀರು ಬಳಸಿಕೊಳ್ಳುತ್ತಿದ್ದಾರೆ.
ಇದಕ್ಕಾಗಿಯೇ ಏರ್‌ವಾಲ್ ಕಟ್ಟೆಯನ್ನೂ ಹಾಳು ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯರು ಸಂಕೇಶ್ವರ ಠಾಣಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ. ರಾವಸಾಹೇಬ ಪಾಟೀಲ, ಸಚಿನ ಕಾಗಲಕರ, ಪದ್ಮರಾಜ ಪಾಟೀಲ,
ದುಂಡಪ್ಪ ಮುನ್ನೋಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net