

ಫೆ.19ರಂದು ರಾಜ್ಯ ಕಾರ್ಯಕಾರಿಣಿಫೆ.19ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ರಾೃಂಡ್‌ನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ. ಪಕ್ಷ ಸಂಘಟನೆ ಜತೆಗೆ ತಾಪಂ, ಜಿಪಂ, ಗ್ರೆಟರ್ ಬೆಂಗಳೂರು ಹಾಗೂ ವಿವಿಧ ಉಪಚುನಾವಣೆಗಳು, ವಿಧಾನ ಪರಿಷತ್ ಸದಸ್ಯ ಸ್ಥಾನಗಳ ಬಗ್ಗೆ ಚರ್ಚೆ ಮಾಡಲಾಗುವುದು. ಸಭೆಯನ್ನು ಕೇಂದ್ರ ಪ್ರಮುಖ ಸಚಿವರೊಬ್ಬರು ಉದ್ಘಾಟಿಸುವರು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಸಮಾರೋಪ ಭಾಷಣ ಮಾಡುವರು ಎಂದು ವಿಜಯೇಂದ್ರ ಹೇಳಿದರು.