ಅಥಣಿ ನಗರದಲ್ಲಿ ಹಮ್ಮಿಕೊಂಡಿದ್ದ ಬುದ್ಧದೇವ ಉಪಾಸನೆ ಮತ್ತು ಜೀವನ ಕೌಶಲ ಮಾರ್ಗದರ್ಶನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸುಹಾಸ ದಾತಾರ, ಬಾಳಾಸಾಹೇಬ ಲೋಕಾಪುರ, ಜೆ.ಪಿ.ದೊಡಮನಿ, ಸ್ವಾತಿ ಕುಲಕರ್ಣಿ ಇತರರಿದ್ದರು.
ನಗರದ ಗಾಂಧಿ ಗ್ರಾಮೀಣ ಗುರುಕುಲ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬುದ್ಧದೇವ ಉಪಾಸನೆ ಮತ್ತು ಜೀವನ ಕೌಶಲ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರ ಸಮಸ್ಯೆ ಪರಿಹರಿಸಲು ಬೋಧನೆಯಲ್ಲಿ ತೊಡಗಿ ಬುದ್ಧಂ ಶರಣಂ ಗಚ್ಚಾಮಿ, ಸಂಘಂ ಶರಣಂ ಗಚ್ಚಾಮಿ, ಧಮ್ಮಂ ಶರಣಂ ಗಚ್ಚಾಮಿ ಎಂದು ಬೋಧಿಸಿ, ಧರ್ಮಕ್ಕೆ ಯಾವಾಗಲೂ ಶರಣಾಗಿ ನಡೆಯಬೇಕು. ಧರ್ಮಕ್ಕೆ ಶರಣಾದರೆ ಗೆಲುವು ನಿಶ್ಚಿತ ಎಂದು ತಿಳಿಸಿದ್ದಾರೆ ಎಂದರು.
ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಾಗರಾಜ ಬೆಳ್ಳಂಕಿ ಹಾಗೂ ತಂಡದವರು ವಿದ್ಯಾರ್ಥಿಗಳಿಗೆ ಕೌಶಲ ಮಾರ್ಗದರ್ಶನ ನೀಡಿದರು.
ಸಾಗರ ಘಾಟಗೆ ಬುದ್ಧಗೀತೆ ಹಾಡಿದರು. ಸ್ವಾತಿ ಕುಲಕರ್ಣಿ ಮಾತನಾಡಿದರು. ಸುಹಾಸ ದಾತಾರ, ಮಂದಾರ ಕಾಥವಟೆ, ನಾರಾಯಣ ಅನಿಖಿಂಡಿ, ನಚಿಕೇತ ಕಾಥವಟೆ, ಶ್ರವಣಾ ಮುತಾಲಿಕದೇಸಾಯಿ, ಪ್ರಿಯಂವದಾ ಹುಲಗಬಾಳಿ, ಡಾ.ಭಾರತಿ ಬಿಜಾಪುರ, ನಾಗರಾಜ ಮಜ್ಜಗಿ, ದುಂಡಪ್ಪ ಗಸ್ತಿ, ಮಂಜುನಾಥ ಪಟ್ಟಣ ಇತರರು ಇದ್ದರು.