ಹಾಲಳ್ಳಿ ಜಾತ್ರೋತ್ಸವ ಅಂಗವಾಗಿ ವಿವಿಧ ಸ್ಪರ್ಧೆ

ಹಾಲಳ್ಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪುರುಷರ ಸೈಕಲ್ ಸ್ಪರ್ಧೆ ನಡೆಯಿತು.
ಹಾಲಳ್ಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪುರುಷರ ಸೈಕಲ್ ಸ್ಪರ್ಧೆ ನಡೆಯಿತು.
Published on
ಅರಟಾಳ: ಸಮೀಪದ ಹಾಲಳ್ಳಿ ಗ್ರಾಮದಲ್ಲಿ ಮಂಗಳವಾರ ಬಸವೇಶ್ವರ ಜಾತ್ರೆ ಅಂಗವಾಗಿ ಮಹಿಳೆಯರ ಮತ್ತು ಪುರುಷರ ಸೈಕಲ್ ಸ್ಪರ್ಧೆ, ಓಟದ ಸ್ಪರ್ಧೆ ನಡೆದವು.
ಮಹಿಳೆಯರ ಸೈಕಲ್ ಸ್ಪರ್ಧೆಯಲ್ಲಿ ಗಂಗಾ ದಡ್ಡಿನ ಪ್ರಥಮ, ನಂದಾ ಚಿಂಚಕಟ್ಟಿ ದ್ವಿತೀಯ, ಸೌಮ್ಯಾ ಛಬ್ಬಿ ತೃತೀಯ ಹಾಗೂ ಅಕ್ಷತಾ ಹಿಪ್ಪರಗಿ ಚತುರ್ಥ ಸ್ಥಾನ ಪಡೆದುಕೊಂಡರು. ಪುರುಷರ ಸೈಕಲ್ ಸ್ಪರ್ಧೆಯಲ್ಲಿ ಯಲಗೂರಪ್ಪ ಗಡಿ ಪ್ರಥಮ, ರಮೇಶ ಮಾಳಗುಂಡಿ ದ್ವಿತೀಯ, ಮಹಮ್ಮದ್ ಸದಾಕ್ ತೃತೀಯ, ಸಂತೋಷ ಕರ್ಣಿ ಚತುರ್ಥ ಸ್ಥಾನ ಪಡೆದರು. ಓಟದ ಸ್ಪರ್ಧೆಯಲ್ಲಿ ಶಿವಾನಂದ ನಾಯಿಕ ಪ್ರಥಮ, ಗಿರೆಪ್ಪ ಗರೆನ್ನವರ ದ್ವಿತೀಯ, ಸಂಗಮೆಶ ಹಳ್ಳಿ ತೃತೀಯ, ಅಜಿತ ದಂಡಿ ಚತುರ್ಥ ಸ್ಥಾನ ಪಡೆದರು. ಅಣ್ಣಪ್ಪ ಬ್ಯಾಡರಟ್ಟಿ, ಶಿವಲಿಂಗ ಬೆವನೂರ, ಸಿದ್ದಗೌಡ ಹಿಪ್ಪರಗಿ, ಅನಿಲ ಮೈಗೂರ, ಬಸವರಾಜ ಕೋಳಿ, ದುಂಡಪ್ಪ ಅಥಣಿ, ಸದಾಶಿವ ಹೊನಗೌಡ, ರಾಮಗೊಂಡ ಕೆಂಚಗೊಂಡ, ಅಶೋಕ ಐಗಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net