ಲಸಿಕೆ ಹಾಕಿಸಿ ಜಾನುವಾರುಗಳ ಕಾಳಜಿ ವಹಿಸಿ

ಮೂಡಲಗಿ ಪಟ್ಟಣದ ಶಿವಬೋಧರಂಗ ಮಠದ ಗೋ ಶಾಲೆಯಲ್ಲಿ ಕಾಲುಬಾಯಿ ರೋಗದ ಲಸಿಕೆ ಹಾಕುವ ಅಭಿಯಾನ ಗಣ್ಯರು ಚಾಲನೆ ನೀಡಿದರು. ಎಸ್.ಎಸ್.ರೊಡ್ಡನವರ, ಮೋಹನ ಕಮತ, ಡಾ.ಪ್ರಶಾಂತ ಕುರಬೇಟ, ಎಸ್.ಪಿ.ಆದಪ್ಪಗೋಳ ಇತರರಿದ್ದರು.
ಮೂಡಲಗಿ ಪಟ್ಟಣದ ಶಿವಬೋಧರಂಗ ಮಠದ ಗೋ ಶಾಲೆಯಲ್ಲಿ ಕಾಲುಬಾಯಿ ರೋಗದ ಲಸಿಕೆ ಹಾಕುವ ಅಭಿಯಾನ ಗಣ್ಯರು ಚಾಲನೆ ನೀಡಿದರು. ಎಸ್.ಎಸ್.ರೊಡ್ಡನವರ, ಮೋಹನ ಕಮತ, ಡಾ.ಪ್ರಶಾಂತ ಕುರಬೇಟ, ಎಸ್.ಪಿ.ಆದಪ್ಪಗೋಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೋಹನ ಕಮತ ಸಲಹೆ
  • ಅಭಿಯಾನಕ್ಕೆ ಚಾಲನೆ
ಮೂಡಲಗಿ: ಜಾನುವಾರುಗಳಿಗೆ ಕಾಲುಬಾಯಿ ಬೇನೆಯ ಲಸಿಕೆ ಹಾಕಿಸಿ ಅವುಗಳ ಕಾಳಜಿ ವಹಿಸಬೇಕು ಎಂದು
ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮೋಹನ ಕಮತ ಹೇಳಿದರು.
ಇಲ್ಲಿಯ ಶಿವಬೋಧರಂಗ ಮಠದ ಗೋ ಶಾಲೆಯಲ್ಲಿ ಪಶುಪಾಲನಾ ಇಲಾಖೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಲುಬಾಯಿ ರೋಗ ಉಚಿತ ಅಭಿಯಾನ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲುಬಾಯಿ ರೋಗ ವೈರಾಣುವಿನಿಂದ ಬರುವಂಥದ್ದು. ರೋಗ ಪೀಡಿತ ಜಾನುವಾರುಗಳಲ್ಲಿ ವಿಪರೀತ ಜ್ವರ, ಬಾಯಲ್ಲಿ ಹುಣ್ಣು, ಜೊಲ್ಲು ಸೋರುವಿಕೆ ಮತ್ತು ಕಾಲುಗಳಲ್ಲಿ ಹುಣ್ಣಾಗುತ್ತವೆ.
ಹೈನು ರಾಸುಗಳಲ್ಲಿ ಇದರಿಂದ ಹಾಲು ಉತ್ಪಾದನೆ ಕುಂಠಿತವಾಗುವ ಜತೆಗೆ ಕಾರ್ಯಕ್ಷಮತೆ ಕ್ಷೀಣಿಸುತ್ತದೆ ಎಂದರು.
ತಾಪಂ ಸಹಾಯಕ ನಿರ್ದೇಶಕ ಎಸ್.ಎಸ್.ರೊಡ್ಡನವರ, ಡಾ.ಪ್ರಶಾಂತ ಕುರಬೇಟ, ಎಸ್.ಪಿ.ಆದಪ್ಪಗೋಳ, ಎಸ್.ಜಿ.ಮಿಲಾನಟ್ಟಿ, ಮಹಾಂತೇಶ ಹೊಸೂರ, ಸರಸ್ವತಿ ಮುರಗೋಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net