ಅಂಕಲಿ ಗ್ರಾಮದಲ್ಲಿರುವ ಕಬ್ಬು ಸಂಶೋಧನಾ ಕೇಂದ್ರದಲ್ಲಿ ಭೂಮಿ ತಾಯಿಯ ರಕ್ಷಣೆ ಕಣ್ಗಾವಲು ಸಮಿತಿ ಸಭೆ ನಡೆಯಿತು. ಪ್ರಶಾಂತ ಮುಳ್ಳಿಮನಿ, ಸಚಿನ ಮೋಪಗಾರ, ರಾಹುಲ ಇಂಚಲಕರಂಜಿ ಇತರರಿದ್ದರು.
ಮಾಂಜರಿ: ಭೂಮಿಗೆ ಹಸಿರೆಲೆ ಮತ್ತು ಜೈವಿಕ ಗೊಬ್ಬರ ನೀಡುವ ಮೂಲಕ ಫಲವತ್ತತೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಅಭಿವೃದ್ಧಿ ಯೋಜನೆ ಅಡಿ ಹಲವು ಸೌಲಭ್ಯ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ಅಽಕಾರಿ ಪ್ರಶಾಂತ ಮುಳ್ಳಿಮನಿ ಹೇಳಿದರು.
ಸಮೀಪದ ಅಂಕಲಿ ಗ್ರಾಮದಲ್ಲಿರುವ ಕಬ್ಬು ಸಂಶೋಧನಾ ಕೇಂದ್ರದಲ್ಲಿ ಚಿದಾನಂದ ಬಸಪ್ರಭು ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭೂಮಿ ತಾಯಿಯ ರಕ್ಷಣೆ ಕಣ್ಗಾವಲು ಸಮಿತಿ ಸಭೆಯಲ್ಲಿ ಮಾತನಾಡಿದರು.
ಕಾರ್ಖಾನೆ ಸಹಾಯಕ ಕಬ್ಬು ಅಭಿವೃದ್ಧಿ ಅಽಕಾರಿ ಸಚಿನ ಮೋಪಗಾರ ಮಾತನಾಡಿ, ಕಬ್ಬಿನ ಇಳುವರಿ ಹೆಚ್ಚಿಸಲು ಕಾರ್ಖಾನೆ ಹಲವು ಕ್ರಮ ಕೈಗೊಂಡಿದೆ. ರೈತರು ಅದನ್ನು ಅನುಸರಿಸಬೇಕು ಎಂದರು.
ಕೃಷಿ ಕೇಂದ್ರದ ಮ್ಯಾನೇಜರ್ ರಾಹುಲ ಇಚಲಕರಂಜಿ ಮಾತನಾಡಿ, ಕಾರ್ಖಾನೆ ವತಿಯಿಂದ ರೈತರಿಗೆ ಅನುಕೂಲವಾಗಲು ಕಿಸಾನ್ ಬಜಾರ್ ಮಳಿಗೆಗಳ ಮೂಲಕ ಹಸಿರೆಲೆ ಗೊಬ್ಬರದ ಬೀಜಗಳು ಮತ್ತು ಜೈವಿಕ ಗೊಬ್ಬರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಖಾನೆ ಕಬ್ಬು ಮೇಲ್ವಿಚಾರಕ ಅಶೋಕ ಪಾಟೀಲ, ಕಾರ್ಖಾನೆ ಸಿಬ್ಬಂದಿ ಹಾಗೂ ರೈತರು ಭಾಗಿಯಾಗಿದ್ದರು. ಅಂಕಲಿ ಗ್ರಾಮದಲ್ಲಿರುವ ಕಬ್ಬು ಸಂಶೋಧನಾ ಕೇಂದ್ರದಲ್ಲಿ ಭೂಮಿ ತಾಯಿಯ ರಕ್ಷಣೆ ಕಣ್ಗಾವಲು ಸಮಿತಿ ಸಭೆ ನಡೆಯಿತು.