ಇಂದಿರಾ ಕ್ಯಾಂಟೀನ್‌ನಲ್ಲಿ ಕೊಳೆತ ತರಕಾರಿ ಬಳಕೆ

ಮುಗಳಖೋಡ ಪಟ್ಟಣದ  ಇಂದಿರಾ ಕ್ಯಾಂಟೀನ್‌ನಲ್ಲಿ ಬಳಸುತ್ತಿರುವ ಕೊಳೆತ ತರಕಾರಿಗಳನ್ನು ತೋರಿಸುತ್ತಿರುವ ಗ್ರಾಮಸ್ಥರು. ಚೇತನ ಯಡವನ್ನವರ, ಶ್ರೀಶೈಲ ಅಂಗಡಿ, ಸುರೇಶ ಹೊಸಪೇಟಿ, ಕರೆಪ್ಪ ಮಂಟೂರ ಇತರರಿದ್ದರು.
ಮುಗಳಖೋಡ ಪಟ್ಟಣದ ಇಂದಿರಾ ಕ್ಯಾಂಟೀನ್‌ನಲ್ಲಿ ಬಳಸುತ್ತಿರುವ ಕೊಳೆತ ತರಕಾರಿಗಳನ್ನು ತೋರಿಸುತ್ತಿರುವ ಗ್ರಾಮಸ್ಥರು. ಚೇತನ ಯಡವನ್ನವರ, ಶ್ರೀಶೈಲ ಅಂಗಡಿ, ಸುರೇಶ ಹೊಸಪೇಟಿ, ಕರೆಪ್ಪ ಮಂಟೂರ ಇತರರಿದ್ದರು.
Published on
ಮುಗಳಖೋಡ: ಪುರಸಭೆ ಎದುರು ಇರುವ ಇಂದಿರಾ ಕ್ಯಾಂಟಿನ್ ಆಹಾರ ತಯಾರಿಕೆ ಘಟಕದಲ್ಲಿ ಕೊಳೆತ ತರಕಾರಿ ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆದಿದೆ.
ಈ ಕುರಿತು ಪ್ರಶ್ನಿಸಿದಾಗ ಸಂಬಂಧಪಟ್ಟ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ನಾಗರಿಕರು ನೀಡಿದ ದೂರಿಗೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಮಹೇಶ ಪವಾಡಿಶೆಟ್ಟಿ, ನಾಳೆ ಗುತ್ತಿಗೆದಾರರನ್ನು ಕರೆಯಿಸಿ ಇಂದಿರಾ ಕ್ಯಾಂಟೀನ್‌ಗೆ ಬರುವ ಗ್ರಾಹಕರಿಗೆ ಪರಿಶುದ್ಧ ಆಹಾರ ನೀಡಬೇಕು. ಇಲ್ಲದೇ ಹೋದರೆ ಟೆಂಡರ್ ರದ್ದುಪಡಿಸುವ ಎಚ್ಚರಿಕೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಸ್ಥರ ಆಗ್ರಹದ ಮೇರೆಗೆ ಪುರಸಭೆ ಸಿಬ್ಬಂದಿ ಇಂದಿರಾ ಕ್ಯಾಂಟೀನ್‌ಗೆ ಬೀಗ ಹಾಕಿದರು. ಗ್ರಾಮಸ್ಥರಾದ ಚೇತನ ಯಡವನ್ನವರ, ರೈತ ಮುಖಂಡರಾದ ಶ್ರೀಶೈಲ ಅಂಗಡಿ, ಸುರೇಶ ಹೊಸಪೇಟಿ, ಕರೆಪ್ಪ ಮಂಟೂರ, ದುಂಡಪ್ಪ ಹಿಪ್ಪರಗಿ, ಅಶೋಕ ಕದಂ, ಅಣ್ಣಪ್ಪ ನಾವಿ, ಮಾರುತಿ ನಾವಿ, ಭೀಮಪ್ಪ ಯಡವನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net