ಸಾವಯವ ಗೊಬ್ಬರ ಬಳಸಿ

ಸಾರಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೀಜೋಪಚಾರ ಆಂದೋಲನ ಮತ್ತು ಕೀಟನಾಶಕ ಅರಿವು ಕಾರ್ಯಕ್ರಮಕ್ಕೆ ಸಹಾಯಕ ಕೃಷಿ ನಿರ್ದೇಶಕ ಆರ್.ಬಿ.ನಾಯ್ಕರ ಚಾಲನೆ ನೀಡಿದರು. ಶಿವಾನಂದ ಕಮತ,  ಸಮೀರ್ ಲೋಕಾಪುರ ಇತರರಿದ್ದರು.
ಸಾರಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೀಜೋಪಚಾರ ಆಂದೋಲನ ಮತ್ತು ಕೀಟನಾಶಕ ಅರಿವು ಕಾರ್ಯಕ್ರಮಕ್ಕೆ ಸಹಾಯಕ ಕೃಷಿ ನಿರ್ದೇಶಕ ಆರ್.ಬಿ.ನಾಯ್ಕರ ಚಾಲನೆ ನೀಡಿದರು. ಶಿವಾನಂದ ಕಮತ, ಸಮೀರ್ ಲೋಕಾಪುರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಹುಕ್ಕೇರಿ
ರಾಸಾಯನಿಕ ಗೊಬ್ಬರ ಹಾಕುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಹಾಗಾಗಿ, ಸಾವಯವ ಗೊಬ್ಬರ ಬಳಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಬಿ.ನಾಯ್ಕರ ಹೇಳಿದರು.
ತಾಲೂಕಿನ ಸಾರಾಪುರ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಭೂಮಿ ತಾಯಿ ರಕ್ಷಣೆ ಕಣ್ಗಾವಲು ಸಮಿತಿ ಸಭೆ, ಬೀಜೋಪಚಾರ ಆಂದೋಲನ ಮತ್ತು ಕೀಟನಾಶಕ ಕುರಿತು ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣು ಸತ್ವ ಕಳೆದುಕೊಂಡಿದೆ. ರೈತರು ನಿರೀಕ್ಷಿಸಿದಷ್ಟು ಇಳುವರಿ ಬರುತ್ತಿಲ್ಲ. ಸಗಣಿ, ಹಸಿರೆಲೆ, ಎರೆಹುಳು ಗೊಬ್ಬರ ಬಳಸಬೇಕು. ಇದರಿಂದ ಮಣ್ಣು ನೀರು ಹಿಡಿದಿಟ್ಟುಕೊಳ್ಳುತ್ತದೆ. ಒಳ್ಳೆಯ ಇಳುವರಿ ಬರುತ್ತದೆ. ರಾಸಾಯನಿಕ ಗೊಬ್ಬರ ಒಂದು ಎಕರೆಗೆ 8 ಸಾವಿರ ರೂ. ಖರ್ಚಾದರೆ, ಸಾವಯವ ಗೊಬ್ಬರಕ್ಕೆ 2-3 ಸಾವಿರ ರೂ. ಖರ್ಚಾಗುತ್ತದೆ. ಮಳೆಗಾಲದ ಮೊದಲು ಸೆಣಬು ಬಿತ್ತಿ. 40 ದಿನಕ್ಕೆ ಉಳುಮೆ ಮಾಡಿ. ಇದರಿಂದ ಮಣ್ಣಿಗೆ ಶಕ್ತಿ ಬರುತ್ತದೆ. ಬಿತ್ತಿದ ಬೆಳೆಯ ಇಳುವರಿ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.
ಕೃಷಿ ಅಧಿಕಾರಿ ಶಿವಾನಂದ ಕಮತ ಮಾತನಾಡಿ, ಜೀವಾಮೃತ ತಯಾರಿಕೆ ವಿಧಾನ ಕುರಿತು ವಿವರಿಸಿದರು. ಆತ್ಮ ಯೋಜನೆ ಅಧಿಕಾರಿ ಸಮೀರ್ ಲೋಕಾಪುರ ಮಾತನಾಡಿ, ಕಡಿಮೆ ಭೂಮಿಯಲ್ಲಿ ಹೆಚ್ಚಿನ ಆದಾಯ ನೀಡುವ ಬೆಳೆಗಳ ಕುರಿತು ತಿಳಿಸಿದರು. ಪಿಡಿಒ ಅಮೃತಾ ಶಿರಹಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net