ಮಧ್ಯವರ್ತಿಗಳ ಮೂಲಕ ನಕಲಿ ದಾಖಲೆಗಳನ್ನು ಪಡೆದುಕೊಂಡು ಈ ರೀತಿ ಮಾಡುವುದು ಅಕ್ರಮ ಚಟುವಟಿಕೆಯಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಗೂ ವಿರುದ್ಧವಾಗಿದೆ. ಇದರಿಂದ ಸ್ಥಳೀಯ ಯುವಕರ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದು, ಅನ್ಯಾಯವಾಗುತ್ತಿದೆ. ಪೊಲೀಸ್ ದೃಢೀಕರಣ (ವೆರಿಫಿಕೇಶನ್) ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಸಮರ್ಪಕ ಹಾಗೂ ಕೂಲಂಕುಶವಾಗಿ ಅರ್ಜಿದಾರರ ನಿವಾಸ, ದಾಖಕೆ ಪ್ರಾಮಾಣಿಕತೆ ಹಾಗೂ ಹಿನ್ನೆಲೆಯನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ಶೈಕ್ಷಣಿಕ ಸಂಸ್ಥೆಗಳು, ವಸತಿ ಗೃಹಗಳು ಹಾಗೂ ಉದ್ಯೋಗ ಸಂಬಂಧಿತ ದಾಖಲೆಗಳಲ್ಲಿ ಸಮಗ್ರ ಪರಿಶೀಲನೆ ನಡೆಸಿ, ನಕಲಿ ಪ್ರಮಾಣ ಪತ್ರಗಳನ್ನು ಬಳಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.