ಕಿರಣ ಕಮತೆ ಯುಪಿಎಸ್‌ಸಿ ಟಾಪರ್

ಕಿರಣ ಸಣ್ಣಪ್ಪ ಕಮತೆ
ಕಿರಣ ಸಣ್ಣಪ್ಪ ಕಮತೆ
Published on
ಬೆಳಗಾವಿ:
ಬೆಂಗಳೂರಿನ ಲೋಕೋಪಯೋಗಿ ಇಲಾಖೆ ಮುಖ್ಯ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್ ಆಗಿದ್ದ, ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ 29 ವರ್ಷದ ಕಿರಣ ಸಣ್ಣಪ್ಪ ಕಮತೆ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 53ನೇ, ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯ ಕೊನೆಯದಾದ 6ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿರುವ ಕಿರಣ ಮೂರು ಬಾರಿ ಐಎಎಸ್ ಮೇನ್ಸ್‌ವರೆಗೆ ಹೋಗಿ ವಿಫಲರಾಗಿದ್ದರು. ಐದು ಬಾರಿ ಪೂರ್ವಭಾವಿ ಪರೀಕ್ಷೆ ಪಾಸ್ ಮಾಡಿದ್ದರು. 2025ರಲ್ಲಿ ಸಂದರ್ಶನ ತಲುಪಿದ್ದರು. ಇದೀಗ ಕೊನೆಯ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮೀಣ ಪ್ರತಿಭೆ ಕಿರಣ ಕಮತೆ ಮಹಾರಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬೆಜೋಗಾಯಿಯಲ್ಲಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ 1 ಮತ್ತು 2ನೇ ತರಗತಿ ಓದಿದ್ದಾರೆ, 3ರಿಂದ 8ನೇ ತರಗತಿವರೆಗೆ ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಎಂ.ಆರ್.ಸಾಖರೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ, 9 ಹಾಗೂ 10ನೇ ತರಗತಿಯನ್ನು ಗದಗನ ಕೆಎಲ್ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಪಿಯು ವಿಜ್ಞಾನವನ್ನು ನಿಪ್ಪಾಣಿಯ ಜಿ.ಐ.ಬಾಗೇವಾಡಿ ಕಾಲೇಜಿನಲ್ಲಿ, ಕೆಎಲ್‌ಎಸ್ ಸಂಸ್ಥೆಯ ಬೆಳಗಾವಿ ಗೋಗಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಪದವಿ ಪೂರೈಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಲೋಕೋಪಯೋಗಿ ಇಲಾಖೆ ಮುಖ್ಯ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. 2026 ಜನವರಿಯಲ್ಲಿ ನಡೆದ ಕೆಪಿಎಸ್‌ಸಿ ಮೇನ್ಸ್ ಪರೀಕ್ಷೆಯಲ್ಲೂ ಕಿರಣ ಉತ್ತೀರ್ಣರಾಗಿದ್ದಾರೆ.
ಕಿರಣ ಕಮತೆ ಅವರ ತಂದೆ ಡಾ.ಸಣ್ಣಪ್ಪ ಕಮತೆ ಚಿಕ್ಕೋಡಿ ತಾಲೂಕಿನ ನಿಡಸೋಸಿ ಹೀರಾ ಶುಗರ್ಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದಾರೆ. ತಾಯಿ ರುಕ್ಮಿಣಿ ಹಾಗೂ ಪತ್ನಿ ಲೋಚನಾ ಗೃಹಣಿಯಾಗಿದ್ದಾರೆ. ಸಹೋದರಿ ಕೀರ್ತಿ ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಎಂಜಿನಿಯರ್ ಆಗಿದ್ದಾರೆ.
--------
ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣವಾಗಿ ಉನ್ನತ ಹುದ್ದೆಗೇರುವುದು ನನ್ನ ಕನಸಾಗಿತ್ತು. ಹೀಗಾಗಿ, ಕೆಲಸದ ಜತೆಗೆ ನಿತ್ಯ 6 ಗಂಟೆ ಅಧ್ಯಯನ ಮಾಡುತ್ತಿದ್ದೆ. 2025ರಲ್ಲಿ ಯಪಿಎಸ್‌ಸಿ ಸಂದರ್ಶನದಲ್ಲಿ 20 ಅಂಕಗಳಿಂದ ೇಲ್ ಆಗಿದ್ದೆ. ಇದು ಕೊನೆಯ ಅವಕಾಶವಾಗಿದ್ದರಿಂದ ಉತ್ತೀರ್ಣ ಆಗಲೇಬೇಕು ಎಂಬ ಹಠದಿಂದ ಓದಿ ಉತ್ತಮ ಲಿತಾಂಶ ಪಡೆದಿದ್ದೇನೆೆ. ನನ್ನ ಸಾಧನೆಯನ್ನು ತಂದೆ-ತಾಯಿಗೆ ಸಮರ್ಪಿಸುತ್ತೇನೆ.
ಕಿರಣ ಸಣ್ಣಪ್ಪ ಕಮತೆ
ಯುಪಿಎಸ್ ಟಾಪರ್, ಕರ್ನಾಟಕ
---------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net