ಹಿಂದೂಗಳಲ್ಲಿ ಒಗ್ಗಟ್ಟು ಅಗತ್ಯ

ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಶ್ರೀಧರ ಸ್ವಾಮಿ, ಡಾ.ಸುನಂದಾ ಕಳಕಣ್ಣವರ, ಅಭಿನವ ವೆಂಕಟೇಶ್ವರ ಮಹಾರಾಜರು, ಪ್ರಕಾಶ ಆಪ್ಟೆ ಇತರರಿದ್ದರು.
ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಶ್ರೀಧರ ಸ್ವಾಮಿ, ಡಾ.ಸುನಂದಾ ಕಳಕಣ್ಣವರ, ಅಭಿನವ ವೆಂಕಟೇಶ್ವರ ಮಹಾರಾಜರು, ಪ್ರಕಾಶ ಆಪ್ಟೆ ಇತರರಿದ್ದರು.
Published on
ನಗರದ ತೇರಬಜಾರದಲ್ಲಿ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಾರತೀಯರ ರಕ್ಷಣೆಗೆ ಆರ್‌ಎಸ್‌ಎಸ್ ಬದ್ಧ. ಉಪ ಜಾತಿಗಳು ಬೇರೆಯಾದರೂ ನಾವೆಲ್ಲರೂ ಒಂದು ಎಂಬ ಪರಿಕಲ್ಪನೆಯೊಂದಿಗೆ ಅಖಂಡ ಹಿಂದೂಗಳು ಒಂದಾಗಬೇಕು. ಇಲ್ಲದಿದ್ದಲ್ಲಿ ನಮ್ಮನ್ನು ನಿರ್ಮೂಲಿಸುವ ಕಾಲ ದೂರವಿಲ್ಲ ಎಂದರು.
ಲಘು ಉದ್ಯೋಗ ಭಾರತಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಡಾ.ಸುನಂದಾ ಕಳಕಣ್ಣವರ ಮಾತನಾಡಿ, ಧರ್ಮದ ಉಳಿವಿಗೆ ಸಂಘಟಿತ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.
ತೊಂಡಿಕಟ್ಟಿಯ ಅವಧೂತ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು, ವೈದ್ಯ ಪ್ರಕಾಶ ಆಪ್ಟೆ ಮಾತನಾಡಿದರು. ಆರ್‌ಎಸ್‌ಎಸ್ ಸೇವಕರು, ಸ್ವಾಗತ ಸಮಿತಿ ಪದಾಧಿಕಾರಿಗಳು, ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net