ರನ್‌ವೇ ಉದ್ದಳತೆ, ಇನ್ಸಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಂ, ಲೈಟಿಂಗ್ ವ್ಯವಸ್ಥೆ ಮತ್ತು ಅಗತ್ಯ ಸೇವೆಗಳು(ವಲಸೆ, ಆರೋಗ್ಯ, ಪ್ರಾಣಿ, ಸಸ್ಯ ಕ್ವಾರಂಟೈನ್‌ನಂತಹ ಅಗತ್ಯ ಸೇವೆ), ಹೊರ ದೇಶಕ್ಕೆ ತೆರಳಲಿರುವ ಪ್ರಯಾಣಿಕರ ಸಂಖ್ಯಾಬಲ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಇದನ್ನು ಪರಿಗಣಿಸಿ ವಿಮಾನಯಾನ ಸಂಸ್ಥೆಗಳು ಹಾರಾಟ ಪ್ರಾರಂಭಿಸಲು ಮುಂದೆ ಬಂದಲ್ಲಿ ಮುಂಬರುವ ದಿನಗಳಲ್ಲಿ ಅವಶ್ಯವಾಗಿ ಪರಿವರ್ತಿಸಲು ಅನುಕೂಲಕವಾಗಲಿದೆ ಎಂದು ವಿವರಿಸಿದ್ದಾಗಿ ಶೆಟ್ಟರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.