ಉಮರಾಣಿ-ಜೋಡಕುರಳಿ ರಸ್ತೆ ಕಾಮಗಾರಿಗೆ ಚಾಲನೆ

ಉಮರಾಣಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿಪೂಜೆ ನೆರವೇರಿಸಿದರು. ಪ್ರೊ.ಎಸ್.ವೈ.ಹಂಜಿ, ಲಕ್ಷ್ಮಣ ಪೂಜೇರಿ, ಮುರಗೆಪ್ಪ ಅಡಿಶೇರಿ ಇತರರಿದ್ದರು.
ಉಮರಾಣಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿಪೂಜೆ ನೆರವೇರಿಸಿದರು. ಪ್ರೊ.ಎಸ್.ವೈ.ಹಂಜಿ, ಲಕ್ಷ್ಮಣ ಪೂಜೇರಿ, ಮುರಗೆಪ್ಪ ಅಡಿಶೇರಿ ಇತರರಿದ್ದರು.
Published on
ಕಬ್ಬೂರ:
ಸಮೀಪದ ಉಮರಾಣಿ ಗ್ರಾಮದಲ್ಲಿ ಮಂಗಳವಾರ 80 ಲಕ್ಷ ರೂ. ಮೌಲ್ಯದ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ನೀರಾವರಿ, ರಸ್ತೆ, ಚರಂಡಿ, ಸಮುದಾಯ ಭವನ ಸೇರಿದಂತೆ ಹಲವು ಕಾಮಗಾರಿಗಳನ್ನು ಕಳೆದ ನಾಲ್ಕು ಅವಧಿಯಲ್ಲಿ ಕೈಗೊಳ್ಳಲಾಗಿದೆ ಎಂದರು.
ಹಿರಿಯ ಸಾಹಿತಿ ಪ್ರೊ.ಎಸ್.ವೈ.ಹಂಜಿ ಮಾತನಾಡಿ, ಚಿಕ್ಕೋಡಿ ಪಟ್ಟಣದಿಂದ ರಾಮಲಿಂಗಕೋಡಿ ದೇವಸ್ಥಾನ ಸಂಪರ್ಕಿಸುವ ರಸ್ತೆ ಹಾಳಾಗಿ ಹಲವು ದಿನಗಳೆ ಕಳೆದಿದ್ದವು. ಇದೀಗ ಶಾಸಕರ ಪ್ರಯತ್ನದಿಂದ ಅಭಿವೃದ್ಧಿಯಾಗುತ್ತಿದೆ ಎಂದು ಹೆಮ್ಮೆಪಟ್ಟರು. 40 ಲಕ್ಷ ರೂ. ಮೊತ್ತದಲ್ಲಿ ಉಮರಾಣಿ-ಜೋಡಕುರಳಿ ರಸ್ತೆ, 40 ಲಕ್ಷ ರೂ. ಅನುದಾನದಲ್ಲಿ ಹಳಿಜೋಳಕೋಡಿ-ರೇಣುಕಾ ನಗರ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿಪೂಜೆ ನೆರವೇರಿಸಿದರು.
ಲಕ್ಷ್ಮಣ ಪೂಜೇರಿ, ಮುರಗೆಪ್ಪ ಅಡಿಶೇರಿ, ಶಿವಮೂರ್ತಿ ಹಳಿಜೋಳೆ, ರುದ್ರಗೌಡ ಪಾಟೀಲ, ಮಲಗೌಡ ಪಾಟೀಲ, ವಿವೇಕಾನಂದ ಸಂಬಾಜೆ, ತಬಗೌಡ ಪಾಟೀಲ, ಧನಪಾಲ ಭೀಮನಾಯ್ಕ, ರಾಜು ಜಿದ್ದಿಮನಿ, ಗಜಾನಂದ ದಾನನ್ನವರ, ಎಸ್.ಎಸ್.ಹೊಸಮನಿ, ಪಿಂಟು ರಾಮನಕಟ್ಟಿ, ಬಾಳೇಶ ಕುಟೋಳಿ, ಮಹಾಂತೇಶ ಭದ್ರನಾಯಕ, ಮಾಯಪ್ಪ ಮಗದುಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net