ಬೈಲಹೊಂಗಲ: ನಗರದ ಇಬ್ಬರು ಯುವಕರು ಕಾರು ಅಪಘಾತದಲ್ಲಿ ಸಾವಿಗೀಡಾದ ಟನೆ ಚಿಕ್ಕಬಾಗೆವಾಡಿ ಹತ್ತಿರ ಬೈಲಹೊಂಗಲ&ಬೆಳಗಾವಿ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಇಲ್ಲಿನ ಟಿಪ್ಪು ನಗರದ ಜಯಬ್ ಅಬ್ದುಲ್ವದುದ ಕಿತ್ತೂರ (19), ಕಾಂಬಳೆ ಗಲ್ಲಿಯ ಕಾರು ಚಾಲಕ
ಅರ್ಷ ಅಬ್ದುಲ್ರೆಹಮಾನ ಸವದತ್ತಿ (23) ಮೃತರು. ಇಬ್ಬರು ಕಾರಿನಲ್ಲಿ ಬೆಳಗಾವಿಗೆ ಬಂದು ಮರಳಿ ತಮ್ಮೂರಿನತ್ತ ಹೋಗುತ್ತಿದ್ದಾಗ ಅಪಘಾತವಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬೈಲಹೊಂಗಲ ಠಾಣೆ ಪೊಲೀಸರು ತಿಳಿಸಿದ್ದಾರೆ.