ಯುವ ಮುಖಂಡ ಉತ್ತಮ ಪಾಟೀಲ ಮಾತನಾಡಿ, ಪ್ರಶಸ್ತಿ ಕಾರ್ಖಾನೆ ಕಾರ್ಯಕ್ಕೆ ಹೊಸ ಪ್ರೇರಣೆ ಶಕ್ತಿ ನೀಡುತ್ತದೆ. ಭವಿಷ್ಯದಲ್ಲಿ ಇದೇ ರೀತಿ ಪ್ರಗತಿ ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಖಾನೆಯ ಅಧ್ಯಕ್ಷ ಉತ್ತಮ ಪಾಟೀಲ, ಎಂಡಿ ಅಭಿನಂದನ ಪಾಟೀಲ ಅವರನ್ನು ಅಭಿನಂದಿಸಲಾಯಿತು. ಶಾಸಕ ಜಗದೀಶ ಗುಡಗುಂಟಿ, ಕಬ್ಬು ಆಯುಕ್ತ ಗೋವಿಂದ ರೆಡ್ಡಿ, ನಿರ್ದೇಶಕ ಗೋಪಾಲ ರಾಜು, ಗೊಬ್ಬರ ಇಲಾಖೆ ನಿರ್ದೇಶಕ ರಾಮಣ್ಣ ಕಟ್ಟಿ, ಕಾರ್ಖಾನೆ ಸಿಇಒ ಮಹಾವೀರ ಪಾಟೀಲ, ಎಚ್‌ಆರ್ ಸಚಿನ ಹಂಚನಾಳೆ, ಅಪ್ಪಾಸಾಹೇಬ ಕೆಸ್ತೆ ಇತರರಿದ್ದರು.