ಅಂತರ ಬೆಳೆ ಕುರಿತು ತರಬೇತಿ

ಅಂಕಲಿ ಗ್ರಾಮದ ಕಾರ್ಖಾನೆ ಕಬ್ಬು ಸಂಶೋಧನಾ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಎನ್.ಎಸ್.ಹಿರೇಮಠ, ಎಂ.ಎನ್.ಮಲಾವಡಿ, ಡಿ.ಸಿ.ಚೌಗಲಾ, ಪ್ರಶಾಂತ ಹುಲಮನಿ ಇತರರಿದ್ದರು.
ಅಂಕಲಿ ಗ್ರಾಮದ ಕಾರ್ಖಾನೆ ಕಬ್ಬು ಸಂಶೋಧನಾ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಎನ್.ಎಸ್.ಹಿರೇಮಠ, ಎಂ.ಎನ್.ಮಲಾವಡಿ, ಡಿ.ಸಿ.ಚೌಗಲಾ, ಪ್ರಶಾಂತ ಹುಲಮನಿ ಇತರರಿದ್ದರು.
Published on
ಮಾಂಜರಿ: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಸಕ್ಕರೆ ಕಾರ್ಖಾನೆ ಕಬ್ಬು ಸಂಶೋಧನಾ ಕೇಂದ್ರದ ಆವರಣದಲ್ಲಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷಿ ಹಾಗೂ ರೈತ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಆಶ್ರಯದಲ್ಲಿ ರಾಷ್ಟ್ರೀಯ ಖಾದ್ಯತೈಲ ಅಭಿಯಾನ ಎಣ್ಣೆಕಾಳು ಬೆಳೆಗಳಲ್ಲಿ ಸಮಗ್ರ ಬೆಳೆ ನಿರ್ವಹಣೆ ಮತ್ತು ಅಂತರ ಬೆಳೆ ಕುರಿತು ತರಬೇತಿ ಕಾರ್ಯಕ್ರಮ ಸೋಮವಾರ ಜರುಗಿತು.
ಕೀಟ ಶಾಸಜ್ಞ ಎಂ.ಎನ್.ಮಲಾವಡಿ, ಕಬ್ಬಿನ ಬೆಳೆಯಲ್ಲಿ ಅಂತರ ಬೆಳೆಯ ನಿರ್ವಹಣೆ ಕುರಿತು ಮಾತನಾಡಿದರು. ಪ್ರಶಾಂತ ಹುಲಮನಿ ಕೃಷಿ ಇಲಾಖೆ ನೀಡುತ್ತಿರುವ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಡಿ.ಸಿ.ಚೌಗಲಾ, ಕಾರ್ಖಾನೆ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಎನ್.ಎಸ್.ಹಿರೇಮಠ, ಸಚಿನ ಮೊಪಗಾರ, ರಾಹುಲ ಇಚಲಕರಂಜಿ, ಎನ್.ಐ.ಪಾಟೀಲ, ಎಸ್.ಡಿ.ಪಾಟೀಲ, ಎ.ಆರ್.ಪಾಟೀಲ, ಆರ್.ಎ.ಭಿವಸೆ, ಎಂ.ಎಸ್.ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net