

ಪ್ರಮುಖ ಮುಖ್ಯಾಂಶಗಳು
ರಾಮದುರ್ಗ: ಗ್ರಾಮೀಣ ಭಾಗದ ಆಚಾರ-ವಿಚಾರ, ಸಂಸ್ಕೃತಿ ಹಾಗೂ ಜೀವನ ಪದ್ಧತಿ ಮಾನವನ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ. ಯುವ ಜನರು ಸಂಪ್ರದಾಯ, ಪರಂಪರೆ ಅನುಸರಿಸುವ ಮೂಲಕ ಮಾದರಿ ಬದುಕು ಕಟ್ಟಿಕೊಳ್ಳಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಎಚ್.ಎಚ್.ನದಾಫ್ ಹೇಳಿದರು.
ಸಿ.ಎಸ್.ಬೆಂಬಳಗಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಸಂಘಗಳ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಯಾಂತ್ರಿಕ ಜೀವನ ಶೈಲಿಯಿಂದ ಗ್ರಾಮೀಣ ಕಲೆ, ಸಾಹಿತ್ಯ ಹಾಗೂ ಪೂರ್ವಜರ ರೂಢಿ-ಸಂಪ್ರದಾಯಗಳು ಮರೆಯಾಗುತ್ತಿವೆ. ಸಂಸ್ಕೃತಿ, ಪರಂಪರೆಗಳನ್ನು ಯುವ ಜನಾಂಗಕ್ಕೆ ಪರಿಚಯಿಸುವ ಜತೆಗೆ ಜಾಗೃತಿ ಮೂಡಿಸಬೇಕು ಎಂದರು.
ಪ್ರ‍್ರೊ.ಎಸ್.ಎಂ.ಸಕ್ರಿ, ಪ್ರ‍್ರೊ.ಬಿ.ಬಿ.ವಂದಾಲ ಇತರರಿದ್ದರು. ಜಿಮಖಾನಾ ಉಪಾಧ್ಯಕ್ಷ ಎಸ್.ಬಿ.ಹಲ್ಯಾಳ ಪರಿಚಯಿಸಿದರು. ಎಸ್.ಎ.ಅಥಣಿ, ಮಂಜುಳಾ ಮೂಡ್ಲವರ ನಿರೂಪಿಸಿದರು.