ಟ್ರಾೃಕ್ಟರ್ ಕಳ್ಳರ ಬಂಧನ

ಹಾರೂಗೇರಿ ಠಾಣೆ ಪೊಲೀಸರು ವಶಪಡಿಸಿಕೊಂಡ ಟ್ರಾೃಕ್ಟರ್ ಮತ್ತು ತನಿಖಾ ತಂಡ.
ಹಾರೂಗೇರಿ ಠಾಣೆ ಪೊಲೀಸರು ವಶಪಡಿಸಿಕೊಂಡ ಟ್ರಾೃಕ್ಟರ್ ಮತ್ತು ತನಿಖಾ ತಂಡ.
Published on
ಬೆಳಗಾವಿ: ಮೂವರು ಟ್ರಾೃಕ್ಟರ್ ಕಳ್ಳರನ್ನು ಬಂಧಿಸಿರುವ ಹಾರೂಗೇರಿ ಠಾಣೆ ಪೊಲೀಸರು ಒಟ್ಟು 9.40 ಲಕ್ಷ ರೂ. ಮೌಲ್ಯದ ಎರಡು ಟ್ರಾೃಕ್ಟರ್, 1 ಟ್ರಾಲಿ, ಕೃತ್ಯಕ್ಕೆ ಉಪಯೋಗಿಸಿದ 2.05 ಲಕ್ಷ ರೂ. ಮೌಲ್ಯದ ಎರಡು ಬೈಕ್ ವಶಪಡಿಸಿಕೊಂಡಿದ್ದಾರೆ.
ಮುಗಳಖೋಡದ ಯಲ್ಲಪ್ಪ ಮೇಟಿ(25), ವಿಲಾಸ ತೂಗದಲಿ(26), ಸಿದ್ರಾಮ ಗೋಕಾಕ(26) ಬಂಧಿತರು. ಮೂಡಲಗಿ ತಾಲೂಕಿನ ಸುಣಧೋಳಿಯ ಶಿವಾನಂದ ವಾಲಿ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಮೇ 14ರಂದು ಮುಗಳಖೋಡ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಟ್ರಾೃಕ್ಟರ್ ಕಳ್ಳತನವಾದ ಬಗ್ಗೆ ದೂರು ದಾಖಲಿಸಿದ್ದರು. ಇದೇ ರೀತಿ ಮೇ 12ರಂದು ಮುಗಳಖೋಡದ ಹಣಮಂತ ದೇವಸ್ಥಾನ ಹತ್ತಿರ ನಿಲ್ಲಿಸಿದ್ದ ತಮ್ಮ ಟ್ರಾೃಕ್ಟರ್ ಕಳ್ಳತನವಾದ ಬಗ್ಗೆ ರಾಯಬಾಗ ತಾಲೂಕು ಚಿಂಚಲಿಯ ರಫೀಕ್ ತರಡೆ ದೂರು ದಾಖಲಿಸಿದ್ದರು.
ಈ ದೂರುಗಳ ಹಿನ್ನೆಲೆ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚವರಿ ಎಸ್ಪಿ ಆರ್.ಬಿ.ಬಸರಗಿ, ಅಥಣಿ ವಿಭಾಗದ ಡಿಎಸ್ಪಿ ಪ್ರಶಾಂತ ಮುನ್ನೊಳ್ಳಿ ಹಾಗೂ ಹಾರೂಗೇರಿ ಸಿಪಿಐ ರತನಕುಮಾರ ಜೀರಗ್ಯಾಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಾಳಪ್ಪ ಪೂಜಾರಿ, ಪ್ರೊಬೆಷನರಿ ಪಿಎಸ್‌ಐ ಕಿಟ್ಟಪ್ಪ ಅಲಗುಂಡಿ ಹಾಗೂ ಸಿಬ್ಬಂದಿ ಪ್ರಕರಣವನ್ನು ಭೇದಿಸಿ ಕಳ್ಳರು, ಮುಗಳಖೋಡ ಗ್ರಾಮದಲ್ಲೇ ಇರುವುದನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖಾ ತಂಡದಲ್ಲಿ ಹಾರೂಗೇರಿ ಠಾಣೆಯ ರಮೇಶ ಮುಂದಿನಮನಿ, ಸಿದ್ದು ಪಾಟೀಲ, ಸೋಮಸುಂದರ ಹಲಕಿ ಹಾಗೂ ಎಸ್ಪಿ ಕಚೇರಿಯ ತಾಂತ್ರಿಕ ವಿಭಾಗದ ವಿನೋದ ಠಕ್ಕಣ್ಣವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net