ಸಾವಯವ ಕೃಷಿಗೆ ಮುಂದಾಗಿ

ಯಲಿಹಡಲಗಿ ಗ್ರಾಮದಲ್ಲಿ ವಿದ್ಯುತ್ ವಿತರಣಾ ಉಪಕೇಂದ್ರ ಮತ್ತು ಆರೋಗ್ಯ ಮತ್ತು ಸ್ವಾಸ್ಥೃ ಕೇಂದ್ರ ಶಂಕುಸ್ಥಾಪನಾ ಸಮಾರಂಭದಲ್ಲಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು. ಗುರುರಾಜ ಸಂಪಣ್ಣವರ, ಮಂಜಪ್ಪ ಅಪ್ಪಣ್ಣವರ, ಸಂಜು ಅಮ್ಮಣ್ಣವರ, ಸಿ.ಎಸ್.ನೇಮಗೌಡ ಇತರರಿದ್ದರು.
ಯಲಿಹಡಲಗಿ ಗ್ರಾಮದಲ್ಲಿ ವಿದ್ಯುತ್ ವಿತರಣಾ ಉಪಕೇಂದ್ರ ಮತ್ತು ಆರೋಗ್ಯ ಮತ್ತು ಸ್ವಾಸ್ಥೃ ಕೇಂದ್ರ ಶಂಕುಸ್ಥಾಪನಾ ಸಮಾರಂಭದಲ್ಲಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು. ಗುರುರಾಜ ಸಂಪಣ್ಣವರ, ಮಂಜಪ್ಪ ಅಪ್ಪಣ್ಣವರ, ಸಂಜು ಅಮ್ಮಣ್ಣವರ, ಸಿ.ಎಸ್.ನೇಮಗೌಡ ಇತರರಿದ್ದರು.
Published on
ಅಥಣಿ ಗ್ರಾಮೀಣ: ಹಣದ ಆಸೆಗಾಗಿ ರೈತರು ಬೆಳೆಗಳಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಮಾಡುತ್ತಿರುವ ಪರಿಣಾಮ ಆರೋಗ್ಯ ಕೆಡುತ್ತಿದೆ. ಇದು ಮುಂದುವರಿದಲ್ಲಿ ಅಪಾಯ ಖಚಿತ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಲ್ಲಿ 18.59 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸುತ್ತಿರುವ 110/11 ಕೆವಿ ವಿದ್ಯುತ್ ವಿತರಣಾ ಉಪಕೇಂದ್ರ ಹಾಗೂ 65 ಲಕ್ಷ ರೂ. ಮೊತ್ತದ ಆರೋಗ್ಯ ಮತ್ತು ಸ್ವಾಸ್ಥೃಕೇಂದ್ರ ಕಟ್ಟಡ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಸಾವಯವ ಕೃಷಿಗೆ ರೈತರು ಮುಂದಾಗಬೇಕು. ಅಂದಾಗ ನೀರಾವರಿ ಯೋಜನೆಗಳು ಸಾರ್ಥಕವಾಗಲಿವೆ. ನಿರ್ಮಾಣ ಹಂತದಲ್ಲಿರುವ ಕೊಟ್ಟಲಗಿ ಅಮ್ಮಾಜೇಶ್ವರಿ ಯೋಜನೆ ಜೂನ್‌ನಲ್ಲಿ ಕೊನೆಗೊಳ್ಳಲಿದೆ. ಕರಿಮಸೂತಿ, ಕೆರೆತುಂಬುವ ಯೋಜನೆಗಳಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಈ ಉದ್ದೇಶದಿಂದ ಯಲಿಹಡಲಗಿ, ತೆಲಸಂಗ, ಸವದಿ, ಸಂಕೋನಟ್ಟಿ ಗ್ರಾಮಗಳಲ್ಲಿ ವಿದ್ಯುತ್ ವಿತರಣಾ ಕೇಂದ್ರ ಮಂಜೂರಾಗಿವೆ ಎಂದರು.
ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಗುರುರಾಜ ಸಂಪಣ್ಣವರ ಮಾತನಾಡಿ, ಯಲಿಹಡಲಗಿ ಗ್ರಾಮದಲ್ಲಿ 50 ಮೆ.ವಾಟ್ ವಿದ್ಯುತ್ ಸೋಲಾರ್ ಪಾರ್ಕ್ ನಿರ್ಮಿಸಿ ರೈತರಿಗೆ ವಿದ್ಯುತ್ ಕೊಡುವಂತಹ ಕಾರ್ಯ ಮಾಡಲಾಗುವುದು. ಸೋಲಾರ್ ಪಂಪ್‌ಸೆಟ್‌ಗೆ ರಾಜ್ಯ ಸರ್ಕಾರ ಶೇ.50 ಮತ್ತು ಕೇಂದ್ರ ಸರ್ಕಾರ ಶೇ.30 ಅನುದಾನ ಪಾವತಿಸುತ್ತದೆ. ಉಳಿದ ಶೇ.20 ಹಣವನ್ನು ರೈತರು ಪಾವತಿಸುವ ಮೂಲಕ ರೈತರು ಸೋಲಾರ್ ಪಂಪ್‌ಸೆಟ್ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬೆಳಗಾವಿ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತ ಮಂಜಪ್ಪ ಅಪ್ಪಣ್ಣವರ ಮಾತನಾಡಿದರು. ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಡಾ.ಎಂ.ಬಿ.ಬಾಲಪ್ಪನವರ, ಸಂಜು ಅಮ್ಮಣ್ಣವರ, ಮಾನಸಿಂಗ ಬೋರಾಡೆ, ಸಿ.ಎಸ್.ನೇಮಗೌಡ, ಶಿವು ಗುಡ್ಡಾಪುರ, ಮಾಳೋಜಿರಾವ್ ಇಂಗೋಲೆ, ಪಿಡಿಒ ಬಸವರಾಜ ಹೊನಕಾಂಬಳೆ, ಘಟಿವಾಳಪ್ಪ ಗುಡ್ಡಾಪುರ, ಮಹಾನಂದಾ ಹಲಕಿ, ಸಿದರಾಯ ನಾಯಿಕ, ಈರಗೌಡ ಪಾಟೀಲ, ನೂರಅಹ್ಮದ್ ಡೊಂಗರಗಾಂವ, ಆರ್.ಆರ್.ತೆಲಸಂಗ, ಮನೋಜ ಬೋರಾಡೆ, ಸದಾಶಿವ ಹರಪಾಳೆ, ಶಂಕರ ಪೂಜಾರಿ, ಮಡಿವಾಳಪ್ಪ ಯಳವರ, ಗುರುದತ್ತ ಕುಲಕರ್ಣಿ, ಮಹಾದೇವ ಬಿರಾದಾರ, ವಿಜಯ ದೊಡಮನಿ, ಮಹಾದೇವಯ್ಯ ಗಚ್ಚಿನಮಠ, ಮುರೇಂದ್ರ ಅಳ್ಳಿಮಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net