ಬೆಳಗಾವಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೆ ಆಗಮನ

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಡಾ.ಜಿ.ಪರಮೇಶ್ವರನನ್ನು ಶಾಸಕ ವಿಶ್ವಾಸ ವೈದ್ಯ ಬರಮಾಡಿಕೊಂಡರು.‌ಮೊಹಮ್ಮದ‌ ರೋಷನ್, . ಸಂದೀಪ ಪಾಟೀಲ ಇತರರಿದ್ದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಡಾ.ಜಿ.ಪರಮೇಶ್ವರನನ್ನು ಶಾಸಕ ವಿಶ್ವಾಸ ವೈದ್ಯ ಬರಮಾಡಿಕೊಂಡರು.‌ಮೊಹಮ್ಮದ‌ ರೋಷನ್, . ಸಂದೀಪ ಪಾಟೀಲ ಇತರರಿದ್ದರು.
Published on
ಬೆಳಗಾವಿ: ಇಲ್ಲಿನ ಸುವರ್ಣವಿಧಾನಸೌಧದ ಸಭಾಂಗಣದಲ್ಲಿ ಜುಲೈ 1ರಂದು ಬೆಳಗ್ಗೆ 10ಕ್ಕೆ ಉಪಮುಖ್ಯಮಂತ್ರಿ, ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಬೆಳಗಾವಿ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಜರುಗಲಿದೆ.
ಉಪಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಡಾ.ಜಿ.ಪರಮೇಶ್ವರ ಅವರನ್ನು ಕಾಂಗ್ರೆಸ್‌ನ ಶಾಸಕರು, ಮುಖಂಡರು, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಸಿಇಒ ರಾಹುಲ ಶಿಂಧೆ, ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಇತರರನ್ನು ಮಂಗಳವಾರ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ಬಳಿಕ ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಜತೆಗೆ ಜಿಲ್ಲೆಯಲ್ಲಿನ ಕುಡಿಯುವ ನೀರು, ಮುಂಗಾರಿನ ಬೆಳೆಗಳ ಸ್ಥಿತಿಗತಿ, ಬೆಳೆಹಾನಿ ಪರಿಹಾರ ಸೇರಿ ವಿವಿಧ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು. ತದನಂತರ ಶಾಸಕರು ಕ್ಷೇತ್ರದಲ್ಲಿ ವಿವಿಧ ಕಾರಣಗಳಿಂದ ಬಾಕಿ ಉಳಿದಿರುವ ಕಾಮಗಾರಿ ಕುರಿತು ಸಚಿವರ ಗಮನಕ್ಕೆ ತಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net