ಈಚೆಗೆ ಯಳ್ಳೂರ ಗ್ರಾಮದಲ್ಲಿ ಬೈಕ್ ಕಳವಾದ ಬಗ್ಗೆ ಹೊನಗಾದ ದಿಲೀಪ್ ಜಾಧವ ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಈ ಮೂವರೂ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಇದೇ ಠಾಣೆ ವ್ಯಾಪ್ತಿಯ 2, ಟಿಳಕವಾಡಿ, ಶಹಾಪುರ, ಹುಕ್ಕೇರಿ ಠಾಣೆ ವ್ಯಾಪ್ತಿಯ ತಲಾ 1 ಹಾಗೂ ವಿವಿಧೆಡೆ 15 ಬೈಕ್ಗಳನ್ನು ಕದ್ದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ತನಿಖೆ ಮುಂದುವರಿದಿದೆ.