ಚಿಂತನೆ ಪ್ರತಿಯೊಬ್ಬರಿಗೂ ಪ್ರೇರಣೆ

ಕೆಎಲ್‌ಇ ಸಂಸ್ಥೆಯ ಚಿದಾನಂದ ಬಿ.ಕೋರೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜರ ಜಯಂತಿ ಕಾರ್ಯಕ್ರಮದಲ್ಲಿ ಸಂಜಯ ಶಿಂದಿಹಟ್ಟಿ, ಡಾ.ಬಿ.ಜಿ.ಕುಲಕರ್ಣಿ, ಪ್ರೊ.ವಿ.ಎ.ಖೋತ ಇತರರಿದ್ದರು.
ಕೆಎಲ್‌ಇ ಸಂಸ್ಥೆಯ ಚಿದಾನಂದ ಬಿ.ಕೋರೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜರ ಜಯಂತಿ ಕಾರ್ಯಕ್ರಮದಲ್ಲಿ ಸಂಜಯ ಶಿಂದಿಹಟ್ಟಿ, ಡಾ.ಬಿ.ಜಿ.ಕುಲಕರ್ಣಿ, ಪ್ರೊ.ವಿ.ಎ.ಖೋತ ಇತರರಿದ್ದರು.
Published on
ಚಿಕ್ಕೋಡಿ: ತ್ಯಾಗವೀರ ಲಿಂಗರಾಜರ ಶೌರ್ಯ, ತ್ಯಾಗ, ಸಮಾಜಮುಖಿ ಚಿಂತನೆ ಹಾಗೂ ಆದರ್ಶ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿವೆ ಎಂದು ಖ್ಯಾತ ದಂತ ವೈದ್ಯ ಸಂಜಯ ಶಿಂದಿಹಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಚಿದಾನಂದ ಬಿ.ಕೋರೆ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಕೆಎಲ್‌ಇ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜರ 165ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕಾರಣೀಕರ್ತರಾದ ಲಿಂಗರಾಜರು ಶಿಕ್ಷಣ, ವೈದ್ಯಕೀಯ ಹಾಗೂ ಕೃಷಿ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ. ಅವರ ಉದಾರ ಮನೋಭಾವ ಸದಾ ಸ್ಮರಣೀಯ ಎಂದರು.
ಪ್ರಾಂಶುಪಾಲ ಡಾ.ಬಿ.ಜಿ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ.ವಿ.ಎ.ಖೋತ, ಪ್ರಾಧ್ಯಾಪಕ ಎಂ.ಬಿ.ನಾವಿ, ಡಾ.ಬಿ.ಜಿ.ಕುಲಕರ್ಣಿ, ಕೆ.ಆರ್.ಪಾಟೀಲ, ಅನಿತಾ ಎಸ್., ಅಪೂರ್ವ ಕದಂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net