ಸಚಿವ ಸ್ಥಾನ ಕೇಳುತ್ತಿರುವುದರಲ್ಲಿ ತಪ್ಪಿಲ್ಲ

 ಡಾ.ಜಿ.ಪರಮೇಶ್ವರ
ಡಾ.ಜಿ.ಪರಮೇಶ್ವರ
Published on
ಬೆಳಗಾವಿ : ಎರಡ್ಮೂರು ಸಲ ಗೆದ್ದ ಶಾಸಕರು ಸಚಿವ ಸ್ಥಾನ ಕೇಳುತ್ತಿರುವುದು ತಪ್ಪಿಲ್ಲ. ಅವರಿಗೆ ಅರ್ಹತೆಯಿದೆ ಹೀಗಾಗಿ ಕೇಳುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ 136 ಶಾಸಕರೆಲ್ಲರೂ ಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ. ಆದರೆ ಶೇ.15ರಷ್ಟು ಶಾಸಕರಿಗೆ ಮಾತ್ರ ಈ ಅವಕಾಶವಿರುತ್ತದೆ. ಹೀಗಾಗಿ, ಬೇರೆ ಬೇರೆ ಸರ್ಕಾರದ ಅವಧಿಯಲ್ಲೂ ಪುನರ್ ರಚನೆ ಮೂಲಕ ಉಳಿದವರಿಗೆ ಅವಕಾಶ ಕೊಡುತ್ತ ಬರಲಾಗಿದೆ. ಇದೇ ರೀತಿಯ ಆಗ್ರಹಗಳು ಕೇಳಿ ಬರುತ್ತಿರುವುದು ಸಹಜ ಎಂದರು.
ತಾವು ಸಿಎಂ ಸ್ಥಾನದ ಆಕಾಂಕ್ಷಿಯಲ್ಲವಾ? ಎಂಬ ಪ್ರಶ್ನೆಗೆ, ನಾವು ಆಸೆ ಇಟ್ಟುಕೊಂಡು ಬಿಡಬಹುದು. ಆದರೆ ತೀರ್ಮಾನ ಮಾಡುವುದು ವರಿಷ್ಠರು. ಯಾವುದಕ್ಕೂ ಅರ್ಜಿ ಕರೆದಿಲ್ಲ. ಕರೆದರೆ ಹಾಕಬಹುದು. ನಮ್ಮ ಪಕ್ಷದಲ್ಲಿ ಏನೇ ತಿರ್ಮಾನವಾಗಬೇಕಿದ್ದರೂ ಹೈಕಮಾಂಡ್‌ನಿಂದ ಆಗಬೇಕು. ಬದಲಾವಣೆ, ಪುನರ್ ರಚನೆ ಎಲ್ಲವನ್ನೂ ಅವರೇ ತಿರ್ಮಾನಿಸುತ್ತಾರೆ ಎಂದು ಸಮಜಾಯಿಸಿ ನೀಡಿದರು.
ಶಾಸಕ ವಿನಯ ಕುಲಕರ್ಣಿ ಪ್ರಕರಣ ಬಗ್ಗೆ ಪ್ರತಿಕ್ರಿಯೆಸಿದ ಅವರು, ಕಾನೂನು ಎಲ್ಲರಿಗೂ ಒಂದೇ. ಯಾರೇ ಆಗಿರಲಿ. ಕಾನೂನು ಪ್ರಕಾರ ಆಗಿರುವುದರ ಬಗ್ಗೆ ಮಾತನಾಡಲು ನನಗೆ ಅರ್ಹತೆ ಇಲ್ಲ. ನ್ಯಾಯಾಲಯ ಕೊಟ್ಟ ತೀರ್ಪು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ವಿನಯ ಕುಲಕರ್ಣಿ ಸಹ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net