ಅಂಬೇಡ್ಕರ್ ಹೆಸರು ಅಳಿಸುವ ಪ್ರಯತ್ನ ನಡೆದಿವೆ

ಬೆಳಗಾವಿಯಲ್ಲಿ ಶನಿವಾರ ರಾಣಿ ಚನ್ನಮ್ಮ ವಿವಿಯ ರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ಸಚಿವ ಸತೀಶ ಜಾರಕಿಹೊಳಿಗೆ ಸನ್ಮಾನಿಸಲಾಯಿತು.
ಬೆಳಗಾವಿಯಲ್ಲಿ ಶನಿವಾರ ರಾಣಿ ಚನ್ನಮ್ಮ ವಿವಿಯ ರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ಸಚಿವ ಸತೀಶ ಜಾರಕಿಹೊಳಿಗೆ ಸನ್ಮಾನಿಸಲಾಯಿತು.
Published on
ಬೆಳಗಾವಿ: ಡಾ.ಬಿ.ಆರ್.ಅಂಬೇಡ್ಕರ್ ಹೆಸರು ಅಳಿಸುವ ಪ್ರಯತ್ನಗಳು ನಡದೇ ಇವೆ. ಆದರೆ ಈ ಭೂಮಿ ಇರುವರೆಗೂ ಅಂಬೇಡ್ಕರ್ ಹೆಸರು ಇರುತ್ತದೆ. ಅದನ್ನು ಅಳಿಸಿ ಹಾಕುವುದು ಅಸಾಧ್ಯ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ, ಸಮಾಜ ಕಾರ್ಯ ವಿಭಾಗ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ನಗರದ ಜಿರಗೆ ಸಭಾಭವನದಲ್ಲಿ ಏರ್ಪಡಿಸಿರುವ ‘ಪ್ರಜ್ಞೆ ವೈಚಾರಿಕೆತೆ ಮತ್ತು ಗಣರಾಜ್ಯ: ಡಾ.ಬಿ.ಆರ್.ಅಂಬೇಡ್ಕರ್’ ಕುರಿತಾದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಶನಿವಾರ ಸಮಾರೋಪದಲ್ಲಿ ಅವರು ಮಾತನಾಡಿದರು.
ಇವತ್ತು ಜಾತಿ ಮುಕ್ತ ಭಾರತ ಕಟ್ಟಬೇಕಾಗಿದೆ. ಬಸವೇಶ್ವರ ಮತ್ತು ಅಂಬೇಡ್ಕರ ಕನಸು ಇದೇ ಆಗಿತ್ತು. ಇವತ್ತು ಬೇರ್ಪಡಿಸುವ ಕೆಲಸಗಳು ಹೆಚ್ಚಾಗುತ್ತಿದ್ದು, ಸುಳ್ಳಿಗಾಗಿ ಹಾಗೂ ಮತ್ತೊಬ್ಬರಿಗಾಗಿ ಹೊಡೆದಾಡಿಕೊಳ್ಳುತ್ತಿದ್ದಾರೆ. ಇದು ಇತಿಹಾಸದಲ್ಲೂ ಆಗಿದೆ. ಈಗಲೂ ಮುಂದುವರೆದಿದ್ದು, ಇದನ್ನು ತಡೆಯಬೇಕಾದರೆ ಮನೆ ಮನೆಗೆ ಅಂಬೇಡ್ಕರನ್ನು ಮುಟ್ಟಿಸುವ ಕಾರ್ಯವಾಗಬೇಕು. ತನ್ನ ಜಾತಿಯನ್ನು ಅರಿತು, ಅದನ್ನು ಮೀರಿ ಬೆಳೆದು ಮನುಷ್ಯರಾಗಿ ಬದುಕುವುದನ್ನು ಕಲಿಯಬೇಕಿದೆ ಎಂದರು.
ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ತಾರತಮ್ಯವನ್ನು ಹೋಗಲಾಡಿಸಲು ಶ್ರಮಿಸಿದ ಬಸವ, ಅಂಬೇಡ್ಕರ್‌ರಂತಹ ಮಹನೀಯರನ್ನು ಪರಿಚಯಿಸುವ ಕಠಿಣ ಕಾಲ ಇಂದು ಎದುರಾಗಿದೆ. ಏನೂ ಮಾಡಿಲ್ಲದವರು, ನಮ್ಮನ್ನು ಮುಟ್ಟದವರೆಲ್ಲ ದೊಡ್ಡ ಹಿರೋವಾಗಿದ್ದಾರೆ. ನಮ್ಮನ್ನು ಮುಟ್ಟಿ ಬದುಕು ಕೊಟ್ಟು, ದಾರಿ ದೀಪವಾದವರು ಇಂದಿಗೂ ಜಾತಿ ಪರೀಧಿಯೊಳಗೆ ಇದ್ದಾರೆ. ಇದು ಬದಲಾಗಬೇಕು. ಬಸವ ಮತ್ತು ಅಂಬೇಡ್ಕರ್‌ರನ್ನು ಇಂದಿನ ಪೀಳಿಗೆಗೆ ಹೆಚ್ಚು ಪರಿಚಯ ಮಾಡಿಕೊಡಬೇಕಿದೆ ಎಂದು ತಿಳಿಸಿದರು.
ಶಾಸಕ ಆಸೀಫ್ ಸೇಠ್, ವಾಕರಸಾ ಸಂಸ್ಥೆ ಉಪಾಧ್ಯಕ್ಷ ಸುನೀಲ್ ಹನುಮಣ್ಣವರ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಚಿಂತಕ ಡಾ.ರಾಜಪ್ಪ ದಳವಾಯಿ, ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಪ್ರೊ.ಜೆ.ಸೋಮಶೇಖರ್, ವಿವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ಕುಲಸಚಿವರಾದ ಸಂತೋಷ ಕಾಮಗೌಡ, ಪ್ರೊ.ಡಿ.ಎನ್.ಪಾಟೀಲ, ಎಂ.ಎ.ಸಪ್ನಾ, ಅಶೋಕ ಡಿಸೋಜಾ, ಡಾ.ಸಬೀರ ಅಹ್ಮದ ಮುಲ್ಲಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net