ಚಿಕ್ಕೋಡಿ:ನರೇಗಾ ಯೋಜನೆ ಹೆಸರಿನಲ್ಲಿ ಮಹಾತ್ಮ ಗಾಂಧಿ ಹೆಸರು ಕೈಬಿಟ್ಟ ವಿಚಾರ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಾಗ್ದಾಳಿ ನಡೆಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಈಗ ಮಹಾತ್ಮ ಗಾಂಧಿ ನೆನಪಾಗುತ್ತಿದ್ದಾರೆ. 45 ಶಿಕ್ಷಣ ಸಂಸ್ಥೆಗಳಿಗೆ ರಾಜೀವ ಗಾಂಧಿ, 23 ಸಂಸ್ಥೆಗಳಿಗೆ ಇಂದಿರಾಗಾಂಧಿ, 4 ಸಂಸ್ಥೆಗಳಿಗೆ ನೆಹರು ಹೆಸರಿಟ್ಟಾಗ ಅವರಿಗೆ ಮಹಾತ್ಮ ಗಾಂಧೀಜಿ ನೆನಪಾಗಲಿಲ್ಲ ಎಂದರು.
ಈಗಿನ ಕಾಂಗ್ರೆಸ್‌ನಲ್ಲಿ ನಕಲಿ ಗಾಂಧಿಗಳೇ ತುಂಬಿದ್ದಾರೆ. ಜನರು ಕಾಂಗ್ರೆಸ್ ಪಕ್ಷದ ಸುಳ್ಳುಗಳನ್ನು ನಂಬಬಾರದು. ಜ.15ರಿಂದ ಕಾಂಗ್ರೆಸ್ ಅಪಪ್ರಚಾರದ ವಿರುದ್ಧ ಜಾಗೃತಿ ಮೂಡಿಸಲಾಗುತ್ತದೆ ಎಂದರು.