ರಂಗಭೂಮಿ ಶ್ರೇಷ್ಠ ಕಲಾಕ್ಷೇತ್ರ

ಬೆಳಗಾವಿಯಲ್ಲಿ ಸೋಮವಾರ ರಂಗಸೃಷ್ಟಿ ಸಂಸ್ಥೆಯಿಂದ ಪ್ರಸಕ್ತ ಸಾಲಿನ ರಂಗಗೌರವವನ್ನು ನಿರ್ಮಲಾ ಪ್ರಕಾಶಗೆ ಪ್ರದಾನ ಮಾಡಲಾಯಿತು. ಎಲ್.ಎಸ್.ಶಾಸ್ತ್ರಿ, ಜ್ಯೋತಿ ಬದಾಮಿ, ಶಿರೀಷ ಜೋಶಿ, ಎಂ.ಕೆ.ಹೆಗಡೆ ಇತರರಿದ್ದರು.
ಬೆಳಗಾವಿಯಲ್ಲಿ ಸೋಮವಾರ ರಂಗಸೃಷ್ಟಿ ಸಂಸ್ಥೆಯಿಂದ ಪ್ರಸಕ್ತ ಸಾಲಿನ ರಂಗಗೌರವವನ್ನು ನಿರ್ಮಲಾ ಪ್ರಕಾಶಗೆ ಪ್ರದಾನ ಮಾಡಲಾಯಿತು. ಎಲ್.ಎಸ್.ಶಾಸ್ತ್ರಿ, ಜ್ಯೋತಿ ಬದಾಮಿ, ಶಿರೀಷ ಜೋಶಿ, ಎಂ.ಕೆ.ಹೆಗಡೆ ಇತರರಿದ್ದರು.
Published on
ಬೆಳಗಾವಿ: ಮನುಷ್ಯನನ್ನು ಸಂಸ್ಕಾರ ವಂತನನ್ನಾಗಿ ಮಾಡುವ ರಂಗಭೂಮಿ ಶ್ರೇಷ್ಠ ಕಲಾಕ್ಷೇತ್ರವಾಗಿದೆ ಎಂದು ಹಿರಿಯ ಸಾಹಿತಿ ಎಲ್.ಎಸ್.ಶಾಸ್ತ್ರಿ ಹೇಳಿದರು.
ವಿಶ್ವರಂಗಭೂಮಿ ದಿನಾಚರಣೆ ಹಿನ್ನೆಲೆ ರಂಗಸೃಷ್ಟಿ ಸಂಸ್ಥೆಯಿಂದ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಿರಿಯ ರಂಗಕರ್ಮಿ ನಿರ್ಮಲಾ ಪ್ರಕಾಶರಿಗೆ ಪ್ರಸಕ್ತ ಸಾಲಿನ ರಂಗಗೌರವ ನೀಡಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ನಿರ್ಮಲಾ ಪ್ರಕಾಶ ಮಾತನಾಡಿದರು. ಶರಣಗೌಡ ಪಾಟೀಲ, ಬಸವರಾಜ ಜಗಜಂಪಿ ಇತರರಿದ್ದರು.
ಡಾ.ರಾಮಕೃಷ್ಣ ಮರಾಠೆ ಪ್ರಾಸ್ತಾವಿಕ ಮಾತನಾಡಿದರು. ಶಿರೀಷ ಜೋಶಿ ಅಭಿನಂದನೆ ನುಡಿಗಳನ್ನಾಡಿದರು. ಶಾಂತಾ ಆಚಾರ್ಯ ವಿಶ್ವ ರಂಗಭೂಮಿ ಸಂದೇಶ ಪ್ರಸ್ತುತ ಪಡಿಸಿದರು.ಎಂ.ಕೆ.ಹೆಗಡೆ ಅಭಿನಂದನಾ ಪತ್ರ ವಾಚಿಸಿದರು. ಜ್ಯೋತಿ ಬದಾಮಿ ನಿರೂಪಿಸಿದರು. ಅಮೃತ ಕುಲಕರ್ಣಿ ಪ್ರಾರ್ಥಿಸಿದರು. ಶರಣಯ್ಯ ಮಠಪತಿ ಸ್ವಾಗತಿಸಿದರು. ಜಯಶ್ರೀ ಕ್ಷೀರಸಾಗರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net