ಪ್ರತಿಭೆ ಗುರುತಿಸಿ ವೇದಿಕೆ ಕಲ್ಪಿಸುವ ಕೆಲಸವಾಗಬೇಕು

 ಬೆಳಗಾವಿಯ  ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿವಿಧ ಸ್ಪರ್ಧೆಗಳ ವಿಜೇತರಿಗೆ ಗುರುವಾರ ನಡೆದ ಸಮಾರಂಭದಲ್ಲಿ  ಡಾ.ಸಂತೋಷ ಜಯಗೌಡರ ಬಹುಮಾನ ವಿತರಿಸಿದರು. ಡಾ.ಅಶೋಕ ಹುಲಗಬಾಳಿ, ಪೂಜಾ ನಾಯಕ, ರಾಜಶೇಖರ ಪಾಟೀಲ ಇತರರಿದ್ದರು.
ಬೆಳಗಾವಿಯ ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿವಿಧ ಸ್ಪರ್ಧೆಗಳ ವಿಜೇತರಿಗೆ ಗುರುವಾರ ನಡೆದ ಸಮಾರಂಭದಲ್ಲಿ ಡಾ.ಸಂತೋಷ ಜಯಗೌಡರ ಬಹುಮಾನ ವಿತರಿಸಿದರು. ಡಾ.ಅಶೋಕ ಹುಲಗಬಾಳಿ, ಪೂಜಾ ನಾಯಕ, ರಾಜಶೇಖರ ಪಾಟೀಲ ಇತರರಿದ್ದರು.
Published on
ಬೆಳಗಾವಿ: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಹೊರ ತಂದು ವೇದಿಕೆ ನಿರ್ಮಿಸುವಲ್ಲಿ ಪಾಲಕರು, ಶಿಕ್ಷಕರು ಹಾಗೂ ಸಮಾಜ ಪ್ರಯತ್ನಿಸಬೇಕು ಎಂದು ಜಿಎಸ್‌ಎಸ್ ಸ್ನಾತಕೋತ್ತರ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಂತೋಷ ಜಯಗೌಡರ ಅಭಿಪ್ರಾಯಪಟ್ಟರು.
ನಾಗನೂರು ರುದ್ರಾಕ್ಷಿ ಮಠದ ಎಸ್.ಜಿ.ಸಂಬರಗಿಮಠ ಸಭಾಗೃಹದಲ್ಲಿ ಗುರುವಾರ ಜರುಗಿದ ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆಯೆಂಬುದು ಕೇವಲ ಅಂಕ ಆಧಾರಿತವಾಗದೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಸೋಲು, ಗೆಲುವುಗಳು ಮನುಷ್ಯನ ಆ ಸಮಯದ ಪ್ರಯತ್ನವನ್ನು ಪ್ರತಿನಿಧಿಸಬಲ್ಲವೇ ಹೊರತು ನಿಜವಾದ ಸಾಮರ್ಥ್ಯವನ್ನಲ್ಲ ಎಂದರು.
ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಅಶೋಕ ಹುಲಗಬಾಳಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗೆ ಭಯಪಡದೇ ಹಬ್ಬದ ರೀತಿಯಲ್ಲಿ ಸಂಭ್ರಮಿಸಬೇಕು. ಕೇವಲ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯರಾಗಿರಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯೆ ಪೂಜಾ ನಾಯಕ, ಸಂಯೋಜಕ ರಾಜಶೇಖರ ಪಾಟೀಲ ಇತರರಿದ್ದರು. ಫಾತಿಮಾ ಉಸ್ತಾದ ಸ್ವಾಗತಿಸಿದರು. ಪ್ರೀತಿ ಅರಳಿಕಟ್ಟಿ ನಿರೂಪಿಸಿದರು. ಲಕ್ಷ್ಮೀ ಬಡಿಗೇರ ಪರಿಚಯಿಸಿದರು. ಸ್ವಾತಿ ಪೂಜಾರ ವಿಜೇತರ ಫಲಿತಾಂಶ ಘೋಷಿಸಿದರು. ಆನಂದ ಸುಲದಾಳ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net